ನವಿಲಿನೊಂದಿಗೆ ಸಖತ್ ಸ್ಟೆಪ್ ಹಾಕಿದ ಬಾಬಾ ಬಾಗೇಶ್ವರ್: ಈ ವಿಡಿಯೋ ಭಾರಿ ವೈರಲ್... - ಬಾಬಾ ಬಾಗೇಶ್ವರ್
🎬 Watch Now: Feature Video
ಗುಜರಾತ್: ಸಾಮಾಜಿಕ ಜಾಲತಾಣಗಳ ಮಾಧ್ಯಮದ ಈ ಯುಗದಲ್ಲಿ ಧೀರೇಂದ್ರ ಕೃಷ್ಣ ಶಾಸ್ತ್ರಿ ಮಹಾರಾಜರ ವಿಶಿಷ್ಠವಾದ ತಮ್ಮ ಶೈಲಿಯೊಂದಿಗೆ ಮುನ್ನೆಲೆಗೆ ಬಂದಿದ್ದಾರೆ. ಲಕ್ಷಾಂತರ ಜನರು ಬಾಬಾನ ದರ್ಶನ ಪಡೆಯಲು ದೂರದೂರುಗಳಿಂದ ಬರುತ್ತಾರೆ. ಬಾಬಾ ಬಾಗೇಶ್ವರ್ ನವಿಲಿನೊಂದಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಇದೀಗ ಸಖತ್ ಹವಾ ಕ್ರಿಯೇಟ್ ಮಾಡಿದೆ.
ಅಹಮದಾಬಾದ್, ರಾಜ್‌ಕೋಟ್, ಸೂರತ್ ವಡೋದರ ಸೇರಿದಂತೆ ವಿವಿಧ ನಗರಗಳಲ್ಲಿ ಬಾಗೇಶ್ವರ ಧಾಮ್ ಸರ್ಕಾರ್‌ನ ಧೀರೇಂದ್ರ ಕೃಷ್ಣ ಶಾಸ್ತ್ರಿ ಮಹಾರಾಜರು ದೈವಿಕ ದರ್ಬಾರು ಮತ್ತು ಹನುಮಾನ್ ಕಥಾ ಕಾರ್ಯಕ್ರಮ ಹಮ್ಮಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೂರತ್‌ನಲ್ಲಿ ನಡೆಯಲಿರುವ ದಿವ್ಯ ದರ್ಬಾರ್‌ಗೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವುದರಿಂದ ಇತರ ನಗರಗಳಲ್ಲೂ ಅವರ ಕಾರ್ಯಕ್ರಮದ ಆಯೋಜಿಸುವ ಬಗ್ಗೆ ಭಕ್ತರಲ್ಲಿ ಉತ್ಸಾಹ ಮೂಡಿದೆ.
ಇನ್ನು ಅಹಮದಾಬಾದ್‌ನಲ್ಲಿ ನಡೆಯಲಿರುವ ದಿವ್ಯ ದರ್ಬಾರ್ ಅನ್ನು ರದ್ದುಗೊಳಿಸಿರುವುದು ಅನೇಕ ಭಕ್ತರಿಗೆ ನಿರಾಶೆ ಮೂಡಿಸಿದೆ. ಬಾಬಾ ಬಾಗೇಶ್ವರ್ ತಮ್ಮ ವಿಭಿನ್ನ ಶೈಲಿಯಿಂದಲೇ ಪ್ರಸಿದ್ಧರಾಗಿದ್ದಾರೆ. ಅವರ ವಿಭಿನ್ನ ಲುಕ್ನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಲಕ್ಷಾಂತರ ಜನರು ಬಾಬಾ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ವೀಕ್ಷಿಸಿದ್ದಾರೆ. ಬಾಬಾ ಬಾಗೇಶ್ವರ್ ನವಿಲಿನೊಂದಿಗೆ ನೃತ್ಯ ಮಾಡುತ್ತಿರುವ ದೃಶ್ಯ ಕಂಡು ಬರುತ್ತದೆ.
ಇದನ್ನೂ ಓದಿ: ಮತ್ತೊಂದು ನಮೀಬಿಯಾ ಚೀತಾ ಕಾಡಿಗೆ ರಿಲೀಸ್: 7ಕ್ಕೆ ತಲುಪಿದ ಚೀತಾಗಳ ಸಂಖ್ಯೆ