ಉತ್ತರಕಾಶಿ ಸುರಂಗ ಕುಸಿತ: ಕಾರ್ಮಿಕರ ಸುರಕ್ಷತೆಗೆ ಪ್ರಾರ್ಥಿಸಿ ಕಲಾವಿದನಿಂದ ಮರಳು ಶಿಲ್ಪ- ವಿಡಿಯೋ - ಮರಳು ಕಲಾವಿದ ಸುದರ್ಶನ್ ಪಟ್ನಾಯಕ್
🎬 Watch Now: Feature Video
Published : Nov 22, 2023, 11:25 AM IST
ಪುರಿ(ಒಡಿಶಾ): ಉತ್ತರಕಾಶಿಯ ಸಿಲ್ಕ್ಯಾರ ಸುರಂಗದೊಳಗೆ ಸಂಕಷ್ಟದಲ್ಲಿ ಸಿಲುಕಿರುವ 41 ಮಂದಿ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ. ಕಾರ್ಮಿಕರ ಸುರಕ್ಷತೆಗೋಸ್ಕರ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಒಡಿಶಾದ ಪ್ರಸಿದ್ಧ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿ ಕಡಲ ತೀರದಲ್ಲಿ ಉತ್ತರಕಾಶಿ ಸುರಂಗದ ಮರಳು ಶಿಲ್ಪಾಕೃತಿ ನಿರ್ಮಿಸಿ, ಕಾರ್ಮಿಕರಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ: ಕಾರ್ಮಿಕರು ಸಿಲುಕಿರುವ ಸುರಂಗದ ಭಾಗಕ್ಕೆ ದೊಡ್ಡ ಪೈಪ್ ಅಳವಡಿಸಿ ಅದರ ಮೂಲಕವೇ ಆಹಾರ, ನೀರು, ಔಷಧಗಳನ್ನು ಪೂರೈಕೆ ಮಾಡಲಾಗುತ್ತಿದೆ. ಇದೇ ಪೈಪ್‌ನಲ್ಲಿ ಕಾರ್ಮಿಕರಿಗೆ ನೈತಿಕ ಸ್ಥೈರ್ಯ ತುಂಬಲು ಕುಟುಂಬಸ್ಥರ ಜೊತೆ ಮಾತನಾಡಿಸಲಾಗಿದೆ. ಹೊರಗೆ ರಕ್ಷಣಾ ಕಾರ್ಯಾಚರಣೆ ವೇಗವಾಗಿ ಸಾಗುತ್ತಿದೆ. "ನಿಮ್ಮನ್ನು ಬೇಗನೆ ಹೊರತರಲಾಗುವುದು, ಹೆದರಬೇಡಿ" ಎಂದು ಕುಟುಂಬಸ್ಥರು ಧೈರ್ಯ ತುಂಬಿದ್ದಾರೆ. ಇದಕ್ಕೆ ಕಾರ್ಮಿಕರು ಕೂಡ ಸ್ಪಂದಿಸಿದ್ದಾರೆ.
ಈ ಮಧ್ಯೆ ರಕ್ಷಣಾ ತಂಡದ ಅಧಿಕಾರಿಗಳು ಕಾರ್ಮಿಕರಿಗೆ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡುವುದರೊಂದಿಗೆ ಎಂಡೋಸ್ಕೋಪಿಕ್ ಫ್ಲೆಕ್ಸಿ ಕ್ಯಾಮೆರಾವನ್ನು ಸುರಂಗದೊಳಗೆ ಕಳುಹಿಸಿ ಅಲ್ಲಿನ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ: ಸುರಂಗದಲ್ಲಿ ಸಿಕ್ಕಿಬಿದ್ದ ಕಾರ್ಮಿಕರ ಜೊತೆ ಪೈಪ್ ಮೂಲಕ ಮಾತನಾಡಿದ ಕುಟುಂಬಸ್ಥರು - ವಿಡಿಯೋ