ಲೂಧಿಯಾನ ಎಸ್‌ಎಸ್‌ಪಿ ಕಚೇರಿಯಲ್ಲಿ ಅಹಿತಕರ ಘಟನೆ: ಡಿಎಸ್‌ಪಿ ಅವರ ಗನ್‌ಮ್ಯಾನ್ ಬುಲೆಟ್ ಗಾಯದಿಂದ ಸಾವು - etv bharath kannada news
🎬 Watch Now: Feature Video
ಲೂಧಿಯಾನ (ಪಂಜಾಬ್) : ಖನ್ನಾ ಅವರ ಎಸ್‌ಎಸ್‌ಪಿ ಕಚೇರಿಯಲ್ಲಿ ಡಿಎಸ್ಪಿಯೊಬ್ಬರ ಗನ್‌ಮ್ಯಾನ್ ಬುಲೆಟ್ ಗಾಯದಿಂದ ಸಾವನ್ನಪ್ಪಿದ್ದಾರೆ. ಬಂದೂಕುಧಾರಿಯನ್ನು ಹಿರಿಯ ಕಾನ್ಸ್ಟೇಬಲ್ ರಶ್ಪಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಮಹಿಳಾ ವಿಭಾಗದ ಡಿಎಸ್ಪಿ ಗುರ್ಮೀತ್ ಸಿಂಗ್ ಜೊತೆಗೆ ರಶ್ಪಿಂದರ್ ಸಿಂಗ್ ಅವರನ್ನು ಗನ್ ಮ್ಯಾನ್ ಆಗಿ ನಿಯೋಜಿಸಲಾಗಿತ್ತು.
ರಶ್ಪಿಂದರ್ ಎದೆಗೆ ಗುಂಡು : ಮಾಹಿತಿ ಪ್ರಕಾರ ಎಸ್‌ಎಸ್‌ಪಿ ಕಚೇರಿಯ ರೀಡರ್ ಶಾಖೆಯಲ್ಲಿ ರಶ್ಪಿಂದರ್ ಕುಳಿತಿದ್ದಾಗ ಇದ್ದಕ್ಕಿದ್ದಂತೆ ಗುಂಡಿನ ಸದ್ದು ಕೇಳಿಸಿತು. ಗಾಯಗೊಂಡ ಸ್ಥಿತಿಯಲ್ಲಿ ರಶ್ಪಿಂದರ್ ಅವರನ್ನು ಹತ್ತಿರದ ಐವಿವೈ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ. ಡಿಎಸ್ಪಿ ಅವರ ಸರ್ವಿಸ್ ರಿವಾಲ್ವರ್ ರಶ್ಪಿಂದರ್ ಕೈಯಲ್ಲಿತ್ತು ಎಂದು ಹೇಳಲಾಗುತ್ತಿದೆ. ಅದನ್ನು ಸ್ವಚ್ಛಗೊಳಿಸುತ್ತಿದ್ದಾಗ ಒಂದು ಗುಂಡು ಹಾರಿದೆ. ಈ ಗುಂಡು ರಶ್ಪಿಂದರ್ ಅವರ ಎದೆಗೆ ತಗುಲಿದೆ. ವೈದ್ಯರು ರಾಶ್ಪಿಂದರ್ ಅವರನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ, ಅವರು ಸಾವನ್ನಪ್ಪಿದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗುಂಡಿನ ದಾಳಿ ಹೇಗೆ ನಡೆದಿದೆ ಎಂಬ ಬಗ್ಗೆ ಅಧಿಕೃತವಾಗಿ ದೃಢಪಟ್ಟಿಲ್ಲ
ಇದನ್ನೂ ಓದಿ: ಕೆಲಸಕ್ಕೆ ತೆರಳುತ್ತಿದ್ದ ಯುವಕನ ಅಪಹರಿಸಿ ಒಂದು ಕೋಟಿ ರೂ.ಗೆ ಬೇಡಿಕೆ: ಪೊಲೀಸರಿಗೆ ತಿಳಿಸಿದ್ದಕ್ಕೆ ಕೊಲೆ