ಮಲಗಿದ್ದಾಗ ಮೈಮೇಲೆ ಹರಿದ ಟಿಪ್ಪರ್; ಕಾರ್ಮಿಕ ಸ್ಥಳದಲ್ಲೇ ಸಾವು - ಪೆಟ್ರೋಲ್ ಬಂಕ್ ಆವರಣ
🎬 Watch Now: Feature Video
Published : Nov 24, 2023, 2:24 PM IST
ಉಡುಪಿ: ಮಲಗಿದ್ದಾಗ ಮೈಮೇಲೆ ಟಿಪ್ಪರ್ ಹರಿದು ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟ ಘಟನೆ ಹೆಬ್ರಿ ಸಮೀಪದ ಸೋಮೇಶ್ವರ ಪೆಟ್ರೋಲ್ ಬಂಕ್ ಆವರಣದಲ್ಲಿ ಶುಕ್ರವಾರ ಬೆಳಿಗ್ಗಿನ ಜಾವ ನಡೆದಿದೆ. ಶಿವರಾಜ್ ಸ್ಥಳದಲ್ಲೇ ಮೃತಪಟ್ಟ ಕಾರ್ಮಿಕನೆಂದು ಗುರುತಿಸಲಾಗಿದೆ.
ಪೆಟ್ರೋಲ್ ಬಂಕ್ ಆವರಣದಲ್ಲಿ ಶಿವರಾಜ್ ಮತ್ತು ಮತ್ತೋರ್ವ ಕಾರ್ಮಿಕ ಮಲಗಿದ್ದರು. ಟಿಪ್ಪರ್ಗೆ ಪೆಟ್ರೋಲ್ ಹಾಕಿಸಿಕೊಂಡ ಟಿಪ್ಪರ್ ಚಾಲಕ, ಮಲಗಿರುವುದನ್ನು ಗಮನಿಸದೇ ಶಿವರಾಜ್ ಮೇಲೆಯೇ ವಾಹನ ಚಲಾಯಿಸಿಕೊಂಡು ಹೋಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಶಿವರಾಜ್ ಅವರನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾದರೂ ಅಷ್ಟರಲ್ಲೇ ಮೃತಪಟ್ಟಿದ್ದರು.
ಘಟನೆ ಇಂದು ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ನಡೆದಿದ್ದು, ದೃಶ್ಯ ಪೆಟ್ರೋಲ್ ಬಂಕ್ ಆವರಣದಲ್ಲಿರುವ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮೃತ ಕಾರ್ಮಿಕ ಶಿವಮೊಗ್ಗ ಮೂಲದ ಸಾಗರ ತಾಲೂಕಿನ ಕೊರ್ಲಿ ಕೊಪ್ಪ ನಿವಾಸಿ ಎಂದು ತಿಳಿದು ಬಂದಿದೆ. ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಲಾರಿ ಚಾಲಕನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಅಥಣಿಯಲ್ಲಿ ಅಪಘಾತ, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ವಿದ್ಯಾರ್ಥಿಗಳು ಪಾರು: ಸಿಸಿಟಿವಿಯಲ್ಲಿ ಸೆರೆ