ಸೀಟಿಗಾಗಿ ಮಹಿಳೆಯರ ಕಿತ್ತಾಟ; ಜಗಳ ಬಿಡಿಸಲಾಗದೇ ಪೊಲೀಸ್ ಠಾಣೆಗೆ ಬಸ್ ಚಲಾಯಿಸಿದ ಚಾಲಕ- ವಿಡಿಯೋ - etv bharat viral videos
🎬 Watch Now: Feature Video
ತುಮಕೂರು: ಬೆಂಗಳೂರಿನಿಂದ ಬೆಳಗಾವಿಗೆ ಹೊರಟಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್ ತುಮಕೂರು ಬಸ್ ನಿಲ್ದಾಣ ತಲುಪುತ್ತಿದ್ದಂತೆ ಮಹಿಳೆಯರಿಬ್ಬರು ಸೀಟ್ಗಾಗಿ ಪರಸ್ಪರ ಕಿತ್ತಾಡಿಕೊಂಡ ಘಟನೆ ನಡೆದಿದೆ. ಮಹಿಳೆಯೊಬ್ಬರು ತುಮಕೂರು ಬಸ್ ನಿಲ್ದಾಣದಿಂದ ಬೆಳಗಾವಿಗೆ ಸೀಟು ಕಾಯ್ದಿರಿಸಿದ್ದರು. ಆ ಸೀಟಿನಲ್ಲಿ ಬೆಂಗಳೂರಿನಿಂದ ಬಂದಿದ್ದ ಮಹಿಳೆ ಕುಳಿತಿದ್ದರು. ಹೀಗಾಗಿ ಆಕೆಗೆ ಸೀಟು ಬಿಟ್ಟು ಕೊಡುವಂತೆ ಕೇಳಿದ್ದಾರೆ.
ಇದಕ್ಕೆ ತಕರಾರು ತೆಗೆದ ಮಹಿಳೆ ಸೀಟು ಬಿಟ್ಟು ಕೊಟ್ಟಿಲ್ಲ. ಇದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಬಳಿಕ ಪರಸ್ಪರ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಒಂದು ಹಂತದಲ್ಲಿ ಇಬ್ಬರೂ ತಲೆ ಕೂದಲು ಹಿಡಿದುಕೊಂಡು ಕಿತ್ತಾಡಿದರು. ಸಹ ಪ್ರಯಾಣಿಕರು ಹಾಗೂ ಚಾಲಕ ಇಬ್ಬರು ಮಹಿಳೆಯರ ಜಗಳ ಬಿಡಿಸಲು ಪ್ರಯತ್ನಪಟ್ಟು ವಿಫಲರಾದರು.
ಇದರಿಂದ ಬೇಸತ್ತ ಚಾಲಕ ನೇರವಾಗಿ ಬಸ್ ಚಾಲನೆ ಮಾಡಿಕೊಂಡು ತುಮಕೂರು ನಗರ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಪೊಲೀಸ್ ಠಾಣೆ ಬಳಿ ಬಸ್ ಸಾಗುತ್ತಿದ್ದಂತೆ ಸೀಟು ಕಾಯ್ದಿರಿಸಿದ್ದೆ ಎಂದು ಜಗಳ ಮಾಡುತ್ತಿದ್ದ ಮಹಿಳೆ ಬಸ್‌ನಿಂದ ಕೆಳಗಿಳಿದು ಹೋಗಿದ್ದಾರೆ. ಈ ಮೂಲಕ ಜಗಳ ಶಮನಗೊಂಡಿದೆ.
ಇದನ್ನೂ ಓದಿ: ಬೀದರ್ನಲ್ಲಿ ಸೀಟಿಗಾಗಿ ಮಹಿಳೆಯರ ಕಿತ್ತಾಟ- ಹುಬ್ಬಳ್ಳಿಯಲ್ಲಿ ವೃದ್ಧೆಗೆ ಕಪಾಳಮೋಕ್ಷ: ವಿಡಿಯೋ ಜಾಲತಾಣದಲ್ಲಿ ವೈರಲ್