ಭದ್ರಾ ಅಭಯಾರಣ್ಯದಲ್ಲಿ ಪ್ರವಾಸಿಗರಿಗೆ ದರ್ಶನ ನೀಡಿದ ಎರಡು ಹುಲಿಗಳು - ವಿಡಿಯೋ - ಹುಲಿಗಳ ಅಪರೂಪದ ದೃಶ್ಯ
🎬 Watch Now: Feature Video


Published : Sep 19, 2023, 7:41 PM IST
ಚಿಕ್ಕಮಗಳೂರು: ಜಿಲ್ಲೆಯ ಭದ್ರಾ ಅಭಯಾರಣ್ಯ ಹಲವು ವಿಶೇಷಗಳಿಗೆ ಸಾಕ್ಷಿಯಾಗಿದೆ. ಹಚ್ಚ ಹಸಿರಿನಿಂದ ನಳನಳಿಸುತ್ತಿರೋ ಭದ್ರಾ ಅಭಯಾರಣ್ಯ ಪರಿಸರ ಪ್ರೇಮಿಗಳನ್ನು ಸ್ವಾಗತಿಸುತ್ತದೆ. ಇಲ್ಲಿನ ಪ್ರಶಾಂತ ವಾತಾವರಣ ಇಂದಿನ ಆಧುನಿಕ ಯುಗದ ಒತ್ತಡದಿಂದ ಹೊರ ಬರಲು ಸೂಕ್ತ ಪ್ರದೇಶವೂ ಕೂಡಾ ಆಗಿದೆ. ಅದೇ ರೀತಿ ಇಲ್ಲಿ ಪ್ರವಾಸಕ್ಕೆ ಬಂದ ಜನರಿಗೆ ಎರಡು ಹುಲಿಗಳು ಗೋಚರವಾಗಿವೆ.
ಪ್ರಕೃತಿ ಸೌಂದರ್ಯದ ಜೊತೆಗೆ ಮುತ್ತೋಡಿ ಅರಣ್ಯದಲ್ಲಿ ಪ್ರಾಣಿಗಳ ವಾಸ ಸ್ಥಳವೂ ಆಗಿದೆ. ಅಪರೂಪದ ಪ್ರಾಣಿಗಳನ್ನು ನೋಡುವ ಸೌಭಾಗ್ಯವೂ ದೊರೆಯುತ್ತದೆ. ಪ್ರಕೃತಿ ನಡುವೆ ಅಪರೂಪದ ಪ್ರಾಣಿಗಳ ದರ್ಶನ ರೋಚಕ ಕ್ಷಣಗಳಿಗೆ ಸಾಕ್ಷಿಯಾಗುತ್ತದೆ. ಸುತ್ತಲೂ ಹಚ್ಚ ಹಸಿರು.. ಅದರ ಮಧ್ಯದಿಂದ ಚಂಗನೆ ಹಾರುವ ಪ್ರಾಣಿಗಳು, ನೀರು ಕುಡಿಯಲು ಬರುವ ಆನೆಗಳ ಹಿಂಡು, ಹತ್ತಾರು ಬಗೆಯ ಹಕ್ಕಿಗಳ ಚಿಲಿಪಿಲಿ ನಿನಾದ ಮನಸ್ಸಿಗೆ ಮುದ ನೀಡುತ್ತದೆ.
ಆನೆ, ಹುಲಿ, ಚಿರತೆ, ಜಿಂಕೆ, ಹಾವು ಸೇರಿದಂತೆ ಅನೇಕ ವನ್ಯ ಮೃಗಗಳನ್ನು ಹತ್ತಿರದಿಂದ ವೀಕ್ಷಣೆಗೆ ಅವಕಾಶವಿದೆ. ಅದೇ ರೀತಿ ಕೆಲ ಪ್ರವಾಸಿಗರು ಭದ್ರ ಅಭಯಾರಣ್ಯದ ಒಳಗೆ ಸಫಾರಿಗೆ ಹೊರಟಾಗ ಎರಡು ಹುಲಿಗಳು ಪ್ರವಾಸಿಗರಿಗೆ ದರ್ಶನ ನೀಡಿವೆ. ಭದ್ರಾ ಅಭಯಾರಣ್ಯದಲ್ಲಿ ಹುಲಿಗಳ ಚಿನ್ನಾಟ ನೋಡಿ ಬೆರಗಾಗಿದ್ದಾರೆ. ಪ್ರವಾಸಿಗರ ಕ್ಯಾಮೆರಾದಲ್ಲಿ ಹುಲಿಗಳ ಚಿನ್ನಾಟದ ವಿಡಿಯೋ ಸೆರೆಯಾಗಿದೆ.
ಸಂಗಾತಿಯೊಂದಿಗೆ ಘರ್ಜಿಸುತ್ತ ಗಂಡು ಹುಲಿ ಆಟ ಆಡುತಿದ್ದು, ಸ್ವಚ್ಛಂದವಾಗಿ ಕಾಡಿನಲ್ಲಿ ವಿಹರಿಸುತ್ತಿರೋ ಹುಲಿಗಳನ್ನು ನೋಡಿ ಪ್ರವಾಸಿಗರು ಸಂತೋಷಪಟ್ಟಿದ್ದಾರೆ. ಅಪರೂಪಕ್ಕೊಮ್ಮೆ ಸಫಾರಿ ವೇಳೆ ರಸ್ತೆ ಬದಿಗೆ ಹುಲಿಗಳು ಬರಲಿದ್ದು, ಯಾವಾಗಲೂ ಈ ರೀತಿಯ ದರ್ಶನ ಪ್ರವಾಸಿಗರಿಗೆ ಭದ್ರ ಅಭಯಾರಣ್ಯದಲ್ಲಿ ಸಿಗುವುದಿಲ್ಲ. ಹುಲಿಗಳ ಈ ಅಪರೂಪದ ದೃಶ್ಯವನ್ನು ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳ