Watch.. 11 ಟನ್ ಟೊಮೆಟೊ ತುಂಬಿದ್ದ ಲಾರಿ ಪಲ್ಟಿ: ಕದಿಯಲು ಬಂದ ಜನರಿಗೆ ಕಾದಿತ್ತು ಬಿಗ್ ಶಾಕ್.. ಏನದು? - ಈಟಿವಿ ಭಾರತ ಕನ್ನಡ
🎬 Watch Now: Feature Video
ಕೋಮರಂ ಭೀಮ್ (ತೆಲಂಗಾಣ): ಟೊಮೆಟೊ ಲೋಡ್ ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಘಟನೆ ಕೋಮರಂ ಭೀಮ್ ಜಿಲ್ಲೆಯ ವಾಂಕಿಡಿ ಮಂಡಲದ ಬೆಂಡಾರ ಗ್ರಾಮದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಟೊಮೆಟೊ ಸಾಗಿಸುತ್ತಿದ್ದ ಲಾರಿ ಪಲ್ಟಿಯಾದ ಸುದ್ದಿ ಕೇಳಿದ ತಕ್ಷಣ ಟೊಮೆಟೊ ಆರಿಸಿಕೊಳ್ಳಲೆಂದು ಸಮೀಪದ ಜನ ಗುಂಪು ಗುಂಪಾಗಿ ಘಟನಾ ಸ್ಥಳಕ್ಕೆ ಕೈಗೆ ಸಿಕ್ಕ ಬ್ಯಾಗ್ಗಳನ್ನು ಹಿಡಿದು ಆಗಮಿಸಿದ್ದಾರೆ. ಈ ವೇಳೆ, ಪೊಲೀಸರು ಲಾಠಿ ಹಿಡಿದು ಟೊಮೆಟೊ ಟ್ರಕ್‌ಗೆ ಕಾವಲು ಕಾಯುತ್ತಿರುವುದನ್ನು ಕಂಡ ಜನ ನಿರಾಶೆಗೊಂಡು ಅಲ್ಲಿಂದ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಸ್ ಮರಳಿದ್ದಾರೆ.
ಲಾರಿ ಪಲ್ಟಿಯಾದಾಗ ತಕ್ಷಣವೇ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಜನರಿಗೆ ಹತ್ತಿರ ಸುಳಿಯದಂತೆ ಲಾರಿಗೆ ಕಾವಲು ಕಾಯಲು ನಿಂತಿದ್ದಾರೆ. ಮತ್ತೊಂದು ವಾಹನಕ್ಕೆ ಸರಕು ತುಂಬುವವರೆಗೂ ಪೊಲೀಸರು ರಕ್ಷಣೆ ನೀಡಿದ್ದಾರೆ. ವಾಹನದಲ್ಲಿ ಸುಮಾರು 11 ಟನ್ ಟೊಮೆಟೊ ಇದ್ದು, ಘಟನೆಯಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಕಳೆದ ಒಂದು ತಿಂಗಳಿಂದ ಟೊಮೆಟೊ ಬೆಲೆ ದುಬಾರಿಯಾಗಿದ್ದು, ಒಂದು ಕೆಜಿ ಬೆಲೆ ಬರೋಬ್ಬರಿ 150 ರೂ. ಗೂ ಹೆಚ್ಚಿದ್ದು, ಗ್ರಾಹಕರ ಹುಬ್ಬೆರಿಸುವಂತೆ ಆಗಿದೆ. ಈ ಹಿಂದೆ ಬೆಲೆ ಕುಸಿತದಿಂದ ಹಲವಾರು ರೈತರು ಟೊಮೆಟೊವನ್ನು ರಸ್ತೆಗೆ ಸುರಿದು ಪ್ರತಿಭಟಿಸಿದ್ದ ನಿದರ್ಶನಗಳು ಇವೇ. ಇದೀಗ ಟೊಮೆಟೊ ಬೆಲೆ ಏರಿಕೆಯಿಂದ ರೈತರ ಪಾಲಿಗೆ ಇದು ಲಾಭದಾಯಕ ಬೆಳೆಯಾಗಿದ್ದು, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಟೊಮೆಟೊ ಸೇವನೆ ಅಪರೂಪವಾಗಿದೆ.
ಇದನ್ನೂ ಓದಿ: Tomato price: ಹೊಸ ಬೆಳೆ ಬಳಿಕ ಟೊಮೆಟೊ ದರ ಇಳಿಕೆ.. ಬೆಳೆ ರಕ್ಷಣೆಗೆ ಗ್ರೀನ್ ಯೋಜನೆ ಜಾರಿ: ಕೇಂದ್ರ ಸರ್ಕಾರ