Derek O'Brien: ಮುಂಗಾರು ಅಧಿವೇಶನದಿಂದ ಟಿಎಂಸಿ ಸಂಸದ ಡೆರೆಕ್ ಒ'ಬ್ರೇನ್ ಅಮಾನತು - ETV Bharath Karnataka

🎬 Watch Now: Feature Video

thumbnail

By

Published : Aug 8, 2023, 12:24 PM IST

ನವದೆಹಲಿ: ತೃಣಮೂಲ ಕಾಂಗ್ರೆಸ್​ನ ಸಂಸದ ಡೆರೆಕ್ ಒ'ಬ್ರೇನ್ ಅವರನ್ನು ರಾಜ್ಯಸಭೆಯ ಮುಂಗಾರು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ ಎಂದು ಸಭಾಪತಿ ಜಗದೀಪ್​ ಧನ್​ಖರ್​ ಘೋಷಿಸಿದ್ದಾರೆ. ಮಂಗಳವಾರ ಸಭೆ ಆರಂಭವಾದಗಿನಿಂದ ಸಭಾನಾಯಕ ಪಿಯೂಷ್ ಗೋಯಲ್ ಅವರಿಗೆ ಮಾತನಾಡಲು ಅಡ್ಡಿ ಪಡಿಸುತ್ತಿದ್ದರು. ಇದರಿಂದ ನಿರಂತರವಾಗಿ ಸದನದ ಕಲಾಪಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಸಭಾಪತಿ ಜಗದೀಪ್ ಧನ್​ಖರ್ ಅವಿಧೇಯತೆ ಮತ್ತು ಸದನದಲ್ಲಿ ನಿರಂತರವಾಗಿ ಗದ್ದಲ ಸೃಷ್ಟಿಸಿದ್ದಕ್ಕಾಗಿ ಡೆರೆಕ್ ಅವರನ್ನು ಅಮಾನತು ಗೊಳಿಸಿದರು.

ಡೆರೆಕ್ ಅವರು ದೆಹಲಿ ಸೇವೆಗಳ ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಸದನಕ್ಕೆ ಅಡ್ಡಿಪಡಿಸಿದರು. ಮೇಲ್ಮನೆಯಲ್ಲಿ ಗದ್ದಲದ ನಡುವೆ, ವಿಪಿ ಧನ್​ಖರ್ ಅವರು ' ಡೆರೆಕ್ ಒ'ಬ್ರೇನ್ ಅವರಿಗೆ ಸದನದಿಂದ ಹೊರಹೋಗಬೇಕು ಎಂದು ಆದೇಶಿಸಿದರು. ಸದನವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಿದ್ದಾರೆ. 

ರಾಜ್ಯಸಭಾ ಸದಸ್ಯ ಟ್ವಿಟರ್​ನಲ್ಲಿ ಪ್ರಧಾನಿ ಮೋದಿ ಮೇಲ್ಮನೆಗೆ ಬರುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಪ್ರಧಾನಿಯಲ್ಲಿ ಲೋಕಸಭೆಗೆ ಕರೆಸಲು ಅವಿಶ್ವಾಸ ನಿರ್ಣಯದ ನಿಯಮಗಳನ್ನು ತೆಗೆದುಕೊಳ್ಳಬೇಕಾಗಿದೆ. ರಾಜ್ಯಸಭೆಯಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಮಣಿಪುರದ ಚರ್ಚೆಯನ್ನು ಪ್ರಾರಂಭಿಸೋಣ ಎಂದು ಡೆರೆಕ್​ ಬರೆದುಕೊಂಡಿದ್ದರು. 

ಇದನ್ನೂ ಓದಿ: Delhi services bill: ಇನ್ನು ದಿಲ್ಲಿಗೆ ಕೇಂದ್ರವೇ ಬಾಸ್​​..ಬಹುಮತವಿಲ್ಲದಿದ್ದರೂ ರಾಜ್ಯಸಭೆಯಲ್ಲಿ ಸುಗ್ರೀವಾಜ್ಞೆ ಪಾಸ್​​, ರಾಷ್ಟ್ರಪತಿ ಅಂಕಿತ ಮಾತ್ರ ಬಾಕಿ  

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.