Tiger hunts Bison: ಗೋಪಾಲಸ್ವಾಮಿ ಬೆಟ್ಟದಲ್ಲಿ ಮಳೆ ನಡುವೆ ಕಾಡೆಮ್ಮೆ ಬೇಟೆಯಾಡಿದ ಹುಲಿ- ವಿಡಿಯೋ - ಹಿಮವದ್ ಗೋಪಾಲಸ್ವಾಮಿ ಬೆಟ್ಟ
🎬 Watch Now: Feature Video
ಚಾಮರಾಜನಗರ: ರಾಜ್ಯದ ಪ್ರಮುಖ ಪ್ರವಾಸಿತಾಣಗಳಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಕೂಡ ಒಂದು. ಇಲ್ಲಿ ಕಾಡುಪ್ರಾಣಿಗಳು ಕಂಡುಬರುವುದು ಸಾಮಾನ್ಯ. ಇದೇ ಪರಿಸರದಲ್ಲಿ ಹುಲಿಯೊಂದು ಕಾಡೆಮ್ಮೆ ಮಾಂಸವನ್ನು ಕಿತ್ತು ತಿನ್ನುತ್ತಿರುವ ದೃಶ್ಯ ಜನರನ್ನು ರೋಮಾಂಚನಗೊಳಿಸಿದೆ.
ಜನರು ಗೋಪಾಲಸ್ವಾಮಿ ಬೆಟ್ಟದಿಂದ ಹಿಂತಿರುಗುವಾಗ ಗುಡ್ಡದಲ್ಲಿ, ಕಾಡೆಮ್ಮೆಯ ತಲೆಭಾಗವನ್ನು ಹುಲಿರಾಯ ಕಿತ್ತು ಎಳೆದೊಯ್ಯುತ್ತಿರುವ ದೃಶ್ಯ ಕಂಡುಬಂದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಸ್ಸಿನಲ್ಲಿ ಬೆಟ್ಟಕ್ಕೆ ತೆರಳುವಾಗ ಈ ಹುಲಿ ಆಗಾಗ ಭಕ್ತರಿಗೆ ಕಾಣಿಸಿಕೊಳ್ಳಲಿದ್ದು, ಬೆಟ್ಟದ ಹುಲಿ ಎಂದೇ ಫೇಮಸ್ ಆಗಿದೆ.
ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಸದಾ ಹಿಮದಿಂದಲೇ ಆವೃತವಾಗಿರುತ್ತದೆ. ಇದು ಜನರಿಗೆ ಕರ್ನಾಟಕದ ಕಾಶ್ಮೀರದಂತೆ ಭಾಸವಾಗುತ್ತದೆ. ಸದ್ಯ ಮಳೆಯ ಜೊತೆಗೆ ಹಿಮದಿಂದ ಕೂಡಿರುವ ಈ ಬೆಟ್ಟಕ್ಕೆ ದಿನಿನಿತ್ಯ ಜನಸಾಗರವೇ ಹರಿದು ಬರುತ್ತದೆ. ಈ ವೇಳೆ ಸುಂದರ ಪ್ರಕೃತಿ ಸೌಂದರ್ಯದ ಜೊತೆಗೆ ಹುಲಿ ದರ್ಶನವೂ ಆಗಿರುವುದು ಭಕ್ತರನ್ನು ಮುದಗೊಳಿಸಿದೆ.
ಇದನ್ನೂ ಓದಿ: ನಂಜನಗೂಡಿನಲ್ಲಿ ಸ್ನಾನಘಟ್ಟ ಮುಳುಗಡೆ; ಡ್ರೋನ್ ಕಣ್ಣಿನಲ್ಲಿ ಕಬಿನಿ ಜಲಾಶಯದ ದೃಶ್ಯ- ವಿಡಿಯೋ