Teachers transfer: ವರ್ಗಾವಣೆಗೊಂಡ ಮೆಚ್ಚಿನ ಗುರುಗಳ ತಬ್ಬಿಕೊಂಡು ವಿದ್ಯಾರ್ಥಿನಿಯರ ಕಣ್ಣೀರು - ದೈಹಿಕ ಶಿಕ್ಷಣ ಶಿಕ್ಷಕ
🎬 Watch Now: Feature Video
ಗದಗ: ಪಾಠ ಮಾಡಿದ ಪ್ರೀತಿಯ ಶಿಕ್ಷಕರೊಬ್ಬರು ವರ್ಗಾವಣೆಯಾಗಿದ್ದು, ಶಿಕ್ಷಕ ಶಾಲೆ ಬಿಟ್ಟು ಹೊರಡೋ ವೇಳೆ ಭಾವುಕರಾದ ವಿದ್ಯಾರ್ಥಿನಿಯರು ಶಿಕ್ಷಕನನ್ನು ತಬ್ಬಿಕೊಂಡು ಬಿಕ್ಕಿಬಿಕ್ಕಿ ಅತ್ತ ಘಟನೆ ನಗರದ ಖಾನತೋಟ ಓಣಿಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ ನಂ. 2 ರಲ್ಲಿ ನಡೆದಿದೆ. ದೈಹಿಕ ಶಿಕ್ಷಣ ಶಿಕ್ಷಕ ಎಸ್. ಬಿ. ಪೂಜಾರ ಕಳೆದ ಒಂದೂವರೆ ವರ್ಷದಿಂದ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಇಂದು ಅವರನ್ನು ವೆಂಕಟಾಪುರ ಗ್ರಾಮದ ಸರಕಾರಿ ಶಾಲೆಗೆ ವರ್ಗಾವಣೆಗೊಳಿಸಿ ಬಿಇಓ ಆದೇಶ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಶಿಕ್ಷಕನನ್ನು ತಬ್ಬಿಕೊಂಡು ವಿದ್ಯಾರ್ಥಿನಿಯರು ಬಿಕ್ಕಿ ಬಿಕ್ಕಿ ಅತ್ತರು.
ಎಸ್. ಬಿ. ಪೂಜಾರ ಅವರಿಗೆ ಶಿಕ್ಷಕರ ವೃಂದದಿಂದ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಮಕ್ಕಳೆಲ್ಲ ಶಿಕ್ಷಕನನ್ನು ಸುತ್ತುವರೆದು ಕಣ್ಣೀರಾದರು. ಮಕ್ಕಳನ್ನು ಸಮಾಧಾನಪಡಿಸಿ ಮತ್ತೆ ಇದೇ ಶಾಲೆಗೆ ಬರ್ತೀನಿ ಎಂದು ಸಮಾಧಾನಪಡಿಸಿ, ಶಿಕ್ಷಕ ಎಸ್.ಬಿ. ಪೂಜಾರ ತೆರಳಿದರು.
ಇದನ್ನೂ ನೋಡಿ: 1ರಿಂದ 5ನೇ ತರಗತಿ ವರೆಗೆ ಒಬ್ಬರೇ ಶಿಕ್ಷಕ: ಶಾಲೆಗೆ ಬರಲು ವಿದ್ಯಾರ್ಥಿಗಳ ಹಿಂದೇಟು