ಬಳ್ಳಾರಿ ಉತ್ಸವದಲ್ಲಿ ಸುನಿಧಿ ಚೌವ್ಹಾಣ್ ಗಾನ ಸುಧೆ- ವಿಡಿಯೋ - ETV Bharat Kannada News
🎬 Watch Now: Feature Video

ಬಳ್ಳಾರಿ : ಖ್ಯಾತ ಗಾಯಕಿ ಸುನಿಧಿ ಚೌವ್ಹಾಣ್ ಅವರ ಸಂಗೀತ ಸುಧೆಯೊಂದಿಗೆ ಎರಡು ದಿನಗಳ ಬಳ್ಳಾರಿ ಉತ್ಸವಕ್ಕೆ ಭಾನುವಾರ ತೆರೆಬಿತ್ತು. ನಗರದ ಮುನ್ಸಿಪಲ್ ಮೈದಾನದಲ್ಲಿ ಒಂದೂವರೆ ಗಂಟೆಗಳ ಕಾಲ ಸುನಿಧಿ ಚೌವ್ಹಾಣ್ ತಮ್ಮ ಹಾಡುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಸುಮಧುರ ಹಾಡಿಗೆ ಯುವಕ, ಯುವತಿಯರು, ಮಹಿಳೆಯರು ಹೆಜ್ಜೆ ಹಾಕಿದರು.
ಸುನಿಧಿ ಹಾಡುತ್ತಾ, ಕುಣಿಯುತ್ತಾ ವೇದಿಕೆ ತುಂಬೆಲ್ಲ ಸುತ್ತಾಡಿದರು. ಮೈದಾನದಲ್ಲಿ ತುಂಬಿದ್ದ ಸಂಗೀತಾಸಕ್ತರನ್ನೂ ಕುಣಿಯುವಂತೆ ಇದು ಪ್ರೇರೇಪಿಸಿತು. ಗಾಯಕಿಯ ಹಾಡಿಗೆ ದನಿಗೂಡಿಸುವುದರ ಜೊತೆಗೆ ಶಿಳ್ಳೆ ಹೊಡೆದು ಪ್ರೋತ್ಸಾಹಿಸಿದರು. ಕಾರ್ಯಕ್ರಮ ಶುರುವಾದ ಬಳಿಕ ಕೊಂಚವೂ ಬಿಡುವು ತೆಗೆದುಕೊಳ್ಳದೆ ಒಂದೂವರೆ ಗಂಟೆ ಒಂದೇ ಸಮನೆ ಸುನಿಧಿ ಸಂಗೀತ ಸುಧೆ ಹರಿಸಿದರು. ಕಮಲಿ ಕಮಲಿ.. ಹಾಡಿನಿಂದ ಕಾರ್ಯಕ್ರಮ ಶುರು ಮಾಡಿದ ಗಾಯಕಿಗೆ ಅವರ ತಂಡದ ಯುವ ಗಾಯಕರು ಸಾಥ್ ಕೊಟ್ಟರು. ಇಡೀ ಹೈಸ್ಕೂಲ್ ಮೈದಾನದಲ್ಲಿ ಜೀವನೋತ್ಸಾಹ ಕಂಡುಬಂತು.
ಇದನ್ನೂ ಓದಿ: ಬಳ್ಳಾರಿ ಉತ್ಸವ : ಸಖತ್ ಸ್ಟೆಪ್ ಹಾಕಿದ ಶ್ರೀರಾಮುಲು, ಸೋಮಶೇಖರ್ ರೆಡ್ಡಿ