ಧಾರವಾಡದ ವಿಶೇಷ ಚೇತನ ಅಭಿಮಾನಿಗೂ ಬಂತು ಅಭಿಷೇಕ್ ಅಂಬಿ ಆರತಕ್ಷತೆ ಆಮಂತ್ರಣ - etv bharat kannada
🎬 Watch Now: Feature Video
ಧಾರವಾಡ: ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ವಿವಾಹವು ಪ್ರೀತಿಸಿದ ಹುಡುಗಿ, ಖ್ಯಾತ ಫ್ಯಾಷನ್ ಡಿಸೈನರ್ ಅವಿವಾ ಬಿದ್ದಪ್ಪ ಜೊತೆಗೆ ನಿನ್ನೆ ನಡೆದಿದೆ. ನಾಳೆ ನವದಂಪತಿಯ ಆರತಕ್ಷತೆ ಕಾರ್ಯಕ್ರಮವು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಸಮಾರಂಭಕ್ಕೆ ಸುಮಲತಾ ಅಂಬರೀಶ್ ಅವರು ಧಾರವಾಡ ವಿಶೇಷ ಚೇತನ ಅಭಿಮಾನಿಗೆ ಆಮಂತ್ರಣ ಪತ್ರಿಕೆ ಕಳುಹಿಸಿ ದೂರವಾಣಿ ಕರೆ ಮೂಲಕ ಆಮಂತ್ರಿಸಿದ್ದಾರೆ.
ಧಾರವಾಡದ ವಿಶೇಷ ಚೇತನ ಯುವತಿಯ ಹೆಸರು ಸೌಭಾಗ್ಯ ಯಮನೂರ. ಈಕೆ ಸುಮಲತಾ ಅಂಬರೀಶ್ ಅವರ ಅಪ್ಪಟ ಅಭಿಮಾನಿ. ಅಂಬರೀಶ್ ಅವರು ನಿಧನರಾದ ಸಮಯದಲ್ಲಿ ಸುಮಲತಾ ಕಣ್ಣೀರಿಟ್ಟಿದ್ದನ್ನು ಕಂಡು ಸೌಭಾಗ್ಯ ಕೂಡ ಕಂಬನಿ ಮಿಡಿದಿದ್ದರು. ಅಲ್ಲದೇ ಪತ್ರಿಕೆಗಳಲ್ಲಿ ಬರುವ ಸುಮಲತಾ ಅವರ ಫೋಟೋಗಳನ್ನು ಕತ್ತರಿಸಿ ಬುಕ್ನಲ್ಲಿ ಅಂಟಿಸುವ ಹವ್ಯಾಸವೂ ಈಕೆಗಿದೆ. ಇದೇ ಅಭಿಮಾನಕ್ಕೆ ಸುಮಲತಾ ಅಂಬರೀಷ್ ಕೂಡ ಮನಸೋತಿದ್ದಾರೆ.
ಹೀಗಾಗಿಯೇ ಸೌಭಾಗ್ಯ ಕುಟುಂಬವನ್ನು ತಮ್ಮ ಮಗ ಅಭಿಷೇಕ್ ಅಂಬರೀಶ್ ಆರತಕ್ಷತೆಗೆ ಬರುವಂತೆ ಆಮಂತ್ರಣ ಪತ್ರಿಕೆ ಜೊತೆಗೆ ದೂರವಾಣಿ ಕರೆಯ ಮೂಲಕ ತಿಳಿಸಿದ್ದಾರೆ. ನಾಳೆ ಬೆಂಗಳೂರಿನ ಅರಮನೆಯ ತ್ರಿಪುರವಾಸಿನಿಯಲ್ಲಿ ನಡೆಯಲಿರುವ ಅಭಿಷೇಕ್ ಅವರ ಆರತಕ್ಷತೆಗೆ ಸೌಭಾಗ್ಯ ತಮ್ಮ ತಂದೆ ತಾಯಿ ಜೊತೆ ಹೊರಟಿದ್ದಾರೆ. ಜೊತೆಗೆ ಸುಮಲತಾರಿಗಾಗಿ ಧಾರವಾಡ ಸೀರೆ ಮತ್ತು ಪೇಡವನ್ನು ಉಡುಗೊರೆಯಾಗಿ ನೀಡಲು ಜೊತೆಗೆ ಕೊಂಡೊಯ್ದಿದ್ದಾರೆ. ಈ ಮೂಲಕ ಸುಮಲತಾರನ್ನು ನೋಡಬೇಕೆಂಬ ಸೌಭಾಗ್ಯ ಕನಸು ಕೂಡ ನನಸಾಗಲಿದೆ.
ಇದನ್ನೂ ಓದಿ: ಪ್ರೀತಿಸಿದ ಹುಡುಗಿ ಜೊತೆ ಹಸೆಮಣೆ ಏರಿದ ಅಭಿಷೇಕ್ ಅಂಬರೀಶ್: ಜೂ.7ರಂದು ಆರತಕ್ಷತೆ