ಗುಜರಾತ್ನಲ್ಲಿ ಅರವಿಂದ್ ಕೇಜ್ರಿವಾಲ್ ರೋಡ್ಶೋ ಮೇಲೆ ಕಲ್ಲು ತೂರಾಟ: ವಿಡಿಯೋ - ಕೇಜ್ರಿವಾಲ್ ರೋಡ್ಶೋಲ್ಲಿ ಮೋದಿ ಘೋಷಣೆ
🎬 Watch Now: Feature Video
ಸೂರತ್(ಗುಜರಾತ್): ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಸಿಎಂ ಸೂರತ್ನಲ್ಲಿ ಸೋಮವಾರ ನಡೆಸಿದ ರೋಡ್ ಶೋ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ನಗರದ ಮುಖ್ಯಬೀದಿಯಲ್ಲಿ ರ್ಯಾಲಿ ನಡೆಯುತ್ತಿದ್ದಾಗ ಸ್ಥಳೀಯ ಬಿಜೆಪಿ ಬೆಂಬಲಿಗರು ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ. ಇದರಿಂದ ಉಭಯ ಪಕ್ಷಗಕಾರ್ಯಕರ್ತರ ಮಧ್ಯೆ ಕಿತ್ತಾಟ ನಡೆದಿದೆ. ಅಲ್ಲದೇ, ಪರಸ್ಪರ ಕಲ್ಲು ತೂರಾಟ ನಡೆಸಿ ದೊಣ್ಣೆಗಳಿಂದ ಹೊಡೆದಾಡಿಕೊಂಡ ದೃಶ್ಯಗಳು ಕಂಡು ಬಂದಿವೆ. ಕೇಜ್ರಿವಾಲ್ ಅವರಿದ್ದ ಕಾರಿನ ಬಾನೆಟ್ ಮೇಲೆ ಕಲ್ಲುಗಳು ಬಿದ್ದಿವೆ. ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ.
Last Updated : Feb 3, 2023, 8:33 PM IST