ನೋಡು ನೋಡು ರಾಮಮಂದಿರ, ಪುರುಷೋತ್ತಮನು ನೆಲೆಸುವ ದಿವ್ಯ ದೇಗುಲ: ವಿಡಿಯೋ - ಪ್ರಾಣ ಪ್ರತಿಷ್ಠಾಪನೆ
🎬 Watch Now: Feature Video


Published : Jan 9, 2024, 12:58 PM IST
ಅಯೋಧ್ಯೆ: ಶತಮಾನಗಳ ಕನಸು ಸಾಕಾರಗೊಂಡು ಇಲ್ಲಿ ತಲೆಎತ್ತಿರುವ ಭವ್ಯ ರಾಮಮಂದಿರ ಜನವರಿ 22 ರಂದು ಲೋಕಾರ್ಪಣೆಯಾಗಲಿವೆ. ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ವಿಶ್ವವೇ ಕಾದು ಕೂತಿದೆ. ಮಂದಿರದ ಸೊಬಗಿನ ಬಗ್ಗೆ ಭಕ್ತರಲ್ಲಿ ಇನ್ನಿಲ್ಲದ ಕುತೂಹಲ ಮೂಡಿದೆ. ಅದನ್ನು ತಣಿಸಲು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕೆಲ ಚಿತ್ರಗಳನ್ನು ಹಂಚಿಕೊಂಡಿತ್ತು. ಇದೀಗ ಅದ್ಭುತವಾದ ವಿಡಿಯೋವನ್ನು ಬಿಡುಗಡೆ ಮಾಡಿದೆ.
ಮೊದಲು 55 ಸೆಕೆಂಡುಗಳ ವಿಡಿಯೋವನ್ನು ಹಂಚಿಕೊಂಡ ಬಳಿಕ, ಇನ್ನೊಂದು ಕಿರುಚಿತ್ರವನ್ನು ರಿಲೀಸ್ ಮಾಡಲಾಗಿದೆ. ಇದರಲ್ಲಿ ರಾಮಮಂದಿರದ ಅತ್ಯದ್ಭುತ ಸೌಂದರ್ಯದ ಅನಾವರಣ ಮಾಡಲಾಗಿದೆ. ಮಂದಿರದಲ್ಲಿ ಕೆತ್ತಲಾಗಿರುವ ಕಲಾಕುಸುರಿ, ಜಟಾಯು, ಸಿಂಹ, ಆನೆಗಳ ವಿಗ್ರಹ, ಶ್ರೀರಾಮ ದರ್ಬಾರ್, ದೊಡ್ಡ ಪ್ರಾಂಗಣಗಳು ಇಲ್ಲಿವೆ.
ಕತ್ತಲೆಯ ವೇಳೆ ತೆಗೆಯಲಾದ ಈ ವಿಡಿಯೋ ದೀಪದ ಬೆಳಕಿನಲ್ಲಿ ಮಂದಿರದ ಸೌಂದರ್ಯವು ಭಕ್ತರ ಮನದಲ್ಲಿ ತಣ್ಣಗೆ ಮನೆಮಾಡುತ್ತದೆ. ಅದ್ಭುತ ಕಟ್ಟಡದ ಪಕ್ಷಿನೋಟವು ಮನಸೂರೆಗೊಳ್ಳುತ್ತದೆ. ಜನವರಿ 22 ರಂದು ಭಗವಾನ್ ರಾಮಲಲ್ಲಾ ದೇವಾಲಯದ ಗರ್ಭಗುಡಿಯಲ್ಲಿ ನೆಲೆಸಲಿದ್ದಾನೆ. ಅಂದಿನ ದಿವ್ಯ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ. 7 ಸಾವಿರಕ್ಕೂ ಅಧಿಕ ಗಣ್ಯರಿಗೆ ಟ್ರಸ್ಟ್ ಮುಖತಃ ಭೇಟಿ ನೀಡಿ ಆಹ್ವಾನ ಪತ್ರ ನೀಡಿದೆ.
ಇದನ್ನೂ ಓದಿ: ಅಬ್ಬಾ..ಎಂತಹ ಮನಮೋಹಕ ಕಲಾಕುಸುರಿ: ದೀಪದ ಬೆಳಕಿನಲ್ಲಿ ಹೊಳೆಯುತ್ತಿರುವ ರಾಮಮಂದಿರ