ಅಂಬಾಭವಾನಿ ದೇವಿಗೆ ₹20, 50, 100, 200, 500 ನೋಟುಗಳಿಂದ ಅಲಂಕಾರ: ವಿಡಿಯೋ - decoration with notes for Goddess Ambabhavani

🎬 Watch Now: Feature Video

thumbnail

By ETV Bharat Karnataka Team

Published : Sep 13, 2023, 10:49 AM IST

ವಿಜಯನಗರ : ಹೊಸಪೇಟೆ ನಗರದ ಬಳ್ಳಾರಿ ರಸ್ತೆಯಲ್ಲಿರುವ ಅಂಬಾ ಭವಾನಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕಡೇ ಮಂಗಳವಾರದ ನಿಮಿತ್ತ ನಿನ್ನೆ (ಮಂಗಳವಾರ) ಎಸ್‌ಎಸ್‌ ಸಮಾಜದ ವತಿಯಿಂದ ದೇವಿಯ ಮೂರ್ತಿಗೆ ನೋಟುಗಳಿಂದ ವಿಶೇಷ ಅಲಂಕಾರ ಮಾಡಲಾಗಿದ್ದು, ಭಕ್ತರನ್ನು ಆಕರ್ಷಿಸುತ್ತಿದೆ.

5 ರೂಪಾಯಿ ನಾಣ್ಯದಿಂದ ಹಿಡಿದು 20, 50, 100, 200, 500 ರೂಪಾಯಿ ಮುಖಬೆಲೆಯ ನೋಟುಗಳನ್ನು ಬಳಸಿ ಆಕರ್ಷಕವಾಗಿ ಅಲಂಕರಿಸಲಾಗಿದೆ. ಒಟ್ಟು 5.61 ಲಕ್ಷ ರೂ. ಬಳಕೆ ಮಾಡಲಾಗಿದೆ. ಗರ್ಭಗುಡಿಯ ದ್ವಾರ ಬಾಗಿಲು ಸೇರಿದಂತೆ ದೇವಿಯ ಮೂರ್ತಿಯನ್ನು 6 ಜನ ಮಹಿಳೆಯರು ಮತ್ತು 7 ಮಂದಿ ಪುರುಷರು ಸೋಮವಾರ ಸಂಜೆ 7 ಗಂಟೆಯಿಂದ ಮಂಗಳವಾರ ಬೆಳಗ್ಗೆ 5 ರ ವರೆಗೆ ಅಲಂಕರಿಸಿದ್ದಾರೆ. 

ನೋಟುಗಳ ಅಲಂಕಾರಕ್ಕಾಗಿ ಕಳೆದ ಮೂರು ವಾರಗಳಿಂದ ನಗದು ಸಂಗ್ರಹಿಸಲಾಗಿತ್ತು. ಪ್ರತಿವರ್ಷವೂ ಇದೇ ದಿನದಂದು ದೇವಿಗೆ ವಿವಿಧ ಬಗೆಯ ನೋಟುಗಳು ಹಾಗೂ ನಾಣ್ಯಗಳಿಂದ ವಿಶೇಷ ಅಲಂಕಾರ ಮಾಡುವ ಸಂಪ್ರದಾಯವಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ : ಸವದತ್ತಿ ಯಲ್ಲಮ್ಮ‌ ದೇವಿಗೆ 'ತಿರಂಗಾ' ಶೃಂಗಾರ - ವಿಡಿಯೋ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.