ಏಕಾಏಕಿ ಕೆಲಸದಿಂದ ಕೈಬಿಟ್ಟ ನೈರುತ್ಯ ರೈಲ್ವೆ ಇಲಾಖೆ: ಮಾಧ್ಯಮದವರ ಮುಂದೆ ಬೇಸರ ಹೊರಹಾಕಿದ ಮಾಜಿ ಸೈನಿಕರು

By ETV Bharat Karnataka Team

Published : Sep 7, 2023, 6:04 PM IST

thumbnail

ಹುಬ್ಬಳ್ಳಿ: ಏಕಾಏಕಿ ಕೆಲಸದಿಂದ ಕೈಬಿಟ್ಟ ನೈರುತ್ಯ ರೈಲ್ವೆ ಇಲಾಖೆಯ ನಿರ್ಧಾರಕ್ಕೆ ಮಾಜಿ ಸೈನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಸುಮಾರು ನಾಲ್ಕು ವರ್ಷಗಳಿಂದ ಗುತ್ತಿಗೆ ಆಧಾರ ಮೇಲೆ ದುಡಿಸಿಕೊಳ್ಳುತ್ತಿದ್ದ ರೈಲ್ವೆ ಇಲಾಖೆಯು, ನಮ್ಮನ್ನು ಇಂದು ದಿಢೀರ್ ಆಗಿ ಸೇವೆಯಿಂದ ವಜಾ ಮಾಡಿದೆ. ರೈಲ್ವೆ ಇಲಾಖೆಯ ಏಕಾಏಕಿ ನಿರ್ಧಾರದಿಂದ ನಮ್ಮ ಕುಟುಂಬದ ನಿರ್ವಹಣೆಯೇ ಕಷ್ಟವಾಗುತ್ತಿದೆ ಎಂದು ಅವರು ಮಾಧ್ಯಮದವರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. 

ನಿವೃತ್ತಿಯ ನಂತರ ಜೀವನೋಪಾಯಕ್ಕಾಗಿ ರೈಲ್ವೆ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಗೇಟ್ ಮ್ಯಾನ್ ಸೇರಿ ಇತರ ವಿಭಾಗಗಳಲ್ಲಿ ಸುಮಾರು 142 ಮಾಜಿ ಸೈನಿಕರು ಕರ್ತವ್ಯ ನಿರ್ವಹಿಸುತಿದ್ದರು. ಆದರೆ, ಈಗ ಅವರನ್ನು ಏಕಾಏಕಿ ತೆಗೆದು ಹಾಕಲಾಗಿದೆ. ರೈಲ್ವೆ ಇಲಾಖೆಯ ಈ ದಿಢೀರ್ ನಿರ್ಧಾರದಿಂದ ಮಾಜಿ ಸೈನಿಕರ ಕುಟುಂಬ ಕಣ್ಣೀರು ಹಾಕುವಂತಾಗಿದೆ. ಬೇರೆ ಯಾವ ಕೆಲಸ ಗೊತ್ತಿಲ್ಲ. ಕೇವಲ ಪೆನ್ಸನ್ ನಂಬಿ ಜೀವನ ಸಾಗಿಸುತ್ತಿದ್ದೇವೆ. ಮಕ್ಕಳ ವಿದ್ಯಾಭ್ಯಾಸ, ಮದುವೆ, ತಂದೆ - ತಾಯಿಯ ಆರೋಗ್ಯಕ್ಕೆ ಹಣ ಹೊಂದಾಣಿಕೆ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ನಮ್ಮ ಸೇವೆಯ ಅರ್ಧ ಜೀವ ಸೇವೆ ಮಾಡಿದ್ದೇವೆ. ಇನ್ನೂ 58 ರಿಂದ 60 ವರ್ಷಗಳ ನಿವೃತ್ತಿಯಾಗುವವರೆಗೂ ಸೇವೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ಹಾಗೂ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಸಲ್ಲಿಸಿದ್ದಾರೆ. 

ಇದನ್ನೂ ಓದಿ: ದೌರ್ಜನ್ಯ ನಡೆದು 120 ದಿನ ಕಳೆದರೂ ಆರೋಪ ಪಟ್ಟಿ ಏಕೆ ದಾಖಲಾಗಿಲ್ಲ: ಅಧಿಕಾರಿಗಳನ್ನು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.