'ಮನೆಯಲ್ಲಿದ್ದರೆ ರಕ್ಷಣೆ, ಹೊರಬಂದರೆ ಪ್ರಾಣಕ್ಕೆ ಅಪಾಯ': ಇಸ್ರೇಲ್ನಲ್ಲಿರುವ ಭಾರತೀಯ ಪ್ರಜೆಯ ಹೇಳಿಕೆ - ಗುಜರಾತ್
🎬 Watch Now: Feature Video
Published : Oct 10, 2023, 7:06 PM IST
ರಾಜ್ ಕೋಟ್ (ಗುಜರಾತ್): ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ನಡೆಸುತ್ತಿದ್ದರೆ, ಇತ್ತ ಇಸ್ರೇಲ್ ಕೂಡ ತಿರುಗೇಟು ನೀಡುತ್ತಿದೆ. ಈ ಯುದ್ಧದಲ್ಲಿ ಅನೇಕ ಮುಗ್ಧ ಜೀವಗಳು ಬಲಿಯಾಗಿವೆ. ಜನರು ಪ್ರತಿ ಕ್ಷಣವೂ ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ದಿನ ಕಳೆಯುವಂತಾಗಿದೆ. ಇಸ್ರೇಲ್‌ನಲ್ಲಿ ಇಸ್ರೇಲಿಗರು ಮಾತ್ರವ ಲ್ಲದೆ ವಿವಿಧ ದೇಶಗಳ ಜನರು ವಾಸವಿದ್ದಾರೆ. ಭಾರತೀಯರು ಕೂಡಾ ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಕೇರಳದ ನರ್ಸ್ವೊಬ್ಬರು ಗಾಯಗೊಂಡಿದ್ದಾರೆ. ಇದೀಗ ಅಲ್ಲಿ ಉಳಿದಿರುವ ಗುಜರಾತ್ನ ರಾಜ್ಕೋಟ್ನ ಸೋನಾಲ್ ಎಂಬ ಮಹಿಳೆ, ತನ್ನ ಸುರಕ್ಷತೆಯ ಬಗ್ಗೆ ಮಾತನಾಡಿದ್ದು, ಪೋಷಕರು ನಿಟ್ಟುಸಿರು ಬಿಡುವಂತಾಗಿದೆ.
ಸೋನಾಲ್ ಗೆಡಿಯಾ 8 ವರ್ಷದಿಂದ ಇಸ್ರೇಲ್‌ನಲ್ಲಿ ವಾಸಿಸುತ್ತಿದ್ದಾರೆ. ಇದೀಗ ಅವರು ತಮ್ಮ ತಂದೆ-ತಾಯಿಯನ್ನು ಸಂಪರ್ಕಿಸಿ, ತಾನು ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇಸ್ರೇಲ್ ಸರ್ಕಾರವು ಮನೆಯಲ್ಲಿಯೇ ಇರಲು ನಮಗೆ ಕಟ್ಟುನಿಟ್ಟಾದ ಸೂಚನೆ ನೀಡಿದೆ. ಅಲ್ಲದೆ, ಮನೆಯಲ್ಲಿದ್ದರೆ ಸರ್ಕಾರವೂ ಸಹಾಯ ಮಾಡುತ್ತದೆ. ಮನೆಯಿಂದ ಹೊರಹೋದರೆ ಭಯಾನಕ ಯುದ್ಧ ಎದುರಿಸಬೇಕಾಗುತ್ತದೆ. ನಾವು ಪ್ರಸ್ತುತ ಇಸ್ರೇಲಿ ಸರ್ಕಾರ ನೀಡಿದ ಸೂಚನೆಗಳನ್ನು ಅನುಸರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಮಗಳ ಬಗ್ಗೆ ತಾಯಿ ನಿರ್ಮಲಾಬೆನ್ ಮಾತನಾಡಿ, ನನ್ನ ಮಗಳು ಕಳೆದ 8 ವರ್ಷಗಳಿಂದ ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಅಲ್ಲಿನ ಈಗಿನ ಪರಿಸ್ಥಿತಿ ನೋಡಿ ಆತಂಕವಾಗುತ್ತಿದೆ. ಕೂಡಲೇ ನಾವು ಮಗಳನ್ನು ಸಂಪರ್ಕಿಸಿದೆವು. ಆಗ ಆಕೆ ಆತಂಕಪಡುವ ಅಗತ್ಯವಿಲ್ಲ, ಇಲ್ಲಿನ ಸರ್ಕಾರ ಈ ಪರಿಸ್ಥಿತಿಯಲ್ಲಿ ಹೊರಗೆ ಹೋಗಲು ಅವಕಾಶ ನೀಡದ ಕಾರಣ ಮನೆಯಲ್ಲಿ ಸುರಕ್ಷಿತವಾಗಿದ್ದೇವೆ ಎಂದಿದ್ದಾರೆ. ನಮ್ಮ ಮಗಳು ಅಲ್ಲಿದ್ದಾಳೆ ಅನ್ನೋದು ಆತಂಕದ ವಿಷಯ. ಆದರೆ ಮೋದಿ ಸರ್ಕಾರ ಇಸ್ರೇಲ್‌ಗೆ ಬೆಂಬಲ ಘೋಷಿಸಿದೆ. ಇದು ನಮಗೆ ಒಂದಿಷ್ಟು ಚಿಂತೆಯಿಂದ ಮುಕ್ತಿ ನೀಡಿದೆ. ನಾವು ಪ್ರತಿದಿನ ನಮ್ಮ ಮಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಅಲ್ಲಿನ ಸ್ಥಿತಿಗತಿಯ ಬಗ್ಗೆ ಎಲ್ಲಾ ಮಾಹಿತಿ ಪಡೆಯುತ್ತಿದ್ದೇವೆ. ನಮ್ಮ ಮಗಳು ಸುತ್ತಮುತ್ತಲಿನ ವಿಡಿಯೊಗಳು ಮತ್ತು ಫೋಟೋಗಳನ್ನು ನಮಗೆ ಕಳುಹಿಸುತ್ತಾಳೆ ಎಂದರು.
ಇದನ್ನೂ ಓದಿ: ಇಸ್ರೇಲ್ ನಿರ್ನಾಮ ಮಾಡಲು ಪ್ರತಿಜ್ಞೆ ಮಾಡಿರುವ ಹಮಾಸ್.. ಏನಿದು Hamas