ಮಳೆಯಿಂದ ನಿಂತ ನೀರಲ್ಲಿ ಹಾವುಗಳ ಸರಸ ಸಲ್ಲಾಪ - ವಿಡಿಯೋ ವೈರಲ್ - The snake dance scene

🎬 Watch Now: Feature Video

thumbnail

By

Published : Jul 30, 2023, 8:34 PM IST

ನವಸಾರಿ (ಗುಜರಾತ್​) : ಇಲ್ಲಿನ ಕಚ್ಚಿಯವಾಡಿ ಪ್ರದೇಶದ ರಸ್ತೆಗಳಲ್ಲಿ ತುಂಬಿದ ನೀರಿನಲ್ಲಿ ಹಾವುಗಳ ಪ್ರಣಯದ ಅಪರೂಪದ ವಿಡಿಯೋ ವೈರಲ್ ಆಗಿದೆ. ಈ ದೃಶ್ಯವನ್ನು ನೋಡಲು ಜನರು ನೆರೆದಿದ್ದರು.  

ಈಗ ಮಳೆಗಾಲವಾದ್ದರಿಂದ ರಸ್ತೆ ಬದಿಯ ದಟ್ಟ ಕಾಡಿನಲ್ಲಿ ಅಲ್ಲಲ್ಲಿ ನೀರು ನಿಂತಿದೆ. ಹೀಗಾಗಿ, ಇಲ್ಲಿ ಹಾವುಗಳು ಪರಸ್ಪರ ನರ್ತಿಸುತ್ತಿದ್ದವು. ಈ ದೃಶ್ಯವನ್ನು ದಾರಿಹೋಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಸ್ವಲ್ಪ ಸಮಯದವರೆಗೆ ನರ್ತಿಸಿದ ನಂತರ ಹಾವುಗಳೆರೆಡು ಮತ್ತೆ ದಟ್ಟವಾದ ಕಾಡಿನಲ್ಲಿ ಕಣ್ಮರೆಯಾಗಿವೆ. ಈ ದೃಶ್ಯವನ್ನು ದಾರಿಹೋಕನೊಬ್ಬನು ತನ್ನ ಮೊಬೈಲ್ ಫೋನ್‌ನಲ್ಲಿ ಸಂಪೂರ್ಣವಾಗಿ ವಿಡಿಯೋವನ್ನು ಸೆರೆಹಿಡಿದಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹಾವುಗಳ ಪ್ರಣಯದ ದೃಶ್ಯ ಸೆರೆ: ಹೊಲದಲ್ಲಿ ಕೆರೆ ಹಾವು ಹಾಗೂ ನಾಗರ ಹಾವುಗಳೆರಡು ಸೇರಿ ಮಿಲನದಲ್ಲಿ ನಿರತವಾಗಿರುವ ದೃಶ್ಯ ವಿಜಯಪುರದ ಮುದ್ದೇಬಿಹಾಳದಲ್ಲಿ (ಜುಲೈ 4-2020) ಸೆರೆಯಾಗಿತ್ತು.

ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಈ ದೃಶ್ಯ ಶನಿವಾರ ಬೆಳಕಿಗೆ ಬಂದಿತ್ತು. ಗ್ರಾಮ ವಿದ್ಯುತ್​ ಪ್ರತಿನಿಧಿ ಬಸನಗೌಡ ಯಾಳವಾರ ಅವರ ಹೊಲದಲ್ಲಿ ಕೆರೆ ಹಾವು ಹಾಗೂ ನಾಗರಹಾವಿನ ಮಿಲನದ ದೃಶ್ಯ ಕಂಡುಬಂದಿತ್ತು.

ಇದನ್ನೂ ಓದಿ: ಹೊಲದಲ್ಲಿ ಕೆರೆ ಹಾವು ಹಾಗೂ ನಾಗರಹಾವಿನ ಮಿಲನದ ದೃಶ್ಯ ಸೆರೆ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.