ಬಂಟ್ವಾಳ: ಭೀತಿ ಹುಟ್ಟಿಸಿದ 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ - ಕಾಳಿಂಗ ಸರ್ಪವನ್ನು ರಕ್ಷಣೆ
🎬 Watch Now: Feature Video
Published : Oct 2, 2023, 9:59 PM IST
ಬಂಟ್ವಾಳ : ತಾಲೂಕಿನ ಪಂಜಿಕಲ್ಲು ಪ್ರದೇಶದ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಳಿಂಗ ಸರ್ಪವನ್ನು ವಗ್ಗದ ಸ್ನೇಕ್ ಕಿರಣ್ ಎಂಬವರು ಹಿಡಿದು ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ. ಪಂಜಿಕಲ್ಲು ಗ್ರಾಮದ ಇನಿಲಕೋಡಿ ನಾರಾಯಣ ಬಂಗೇರ ಎಂಬವರ ಮನೆಯಂಗಳದಲ್ಲಿ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿತ್ತು. ರೋಹಿಣಿ ಎಂಬವರು ತೋಟಕ್ಕೆ ಹೋಗಿ ವಾಪಸ್ ಮನೆಗೆ ಬರುವ ಸಂದರ್ಭದಲ್ಲಿ ಹಾವನ್ನು ತುಳಿದಿದ್ದರು. ಕ್ಷಣಾರ್ಧದಲ್ಲಿ ಗಮನಕ್ಕೆ ಬಂದು ಅಪಾಯದಿಂದ ಪಾರಾಗಿದ್ಧಾರೆ.
ಕೂಡಲೇ ಮನೆಯವರು ಸ್ನೇಕ್ ಕಿರಣ್‌ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಕಿರಣ್, ಹಾವು ರಕ್ಷಣೆ ಮಾಡಿದರು. ಅರಣ್ಯ ಇಲಾಖೆಯ ಸಹಕಾರದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಿರಿಲ್ ಆಚಾರಿಪಾಲಿಕೆ, ಧೀರಜ್ ನಾವುರ, ಅರಣ್ಯ ಸಿಬ್ಬಂದಿ ಸ್ಮಿತಾ ಹಾಗೂ ಜಯರಾಮ್ ಸಹಕರಿಸಿದರು.
ಎಂಟು ವರ್ಷಗಳ ಹಿಂದೆ ಬಿ.ಸಿ.ರೋಡಿನ ಹರಿಕೃಷ್ಣ ಬಂಟ್ವಾಳ ಅವರ ಮನೆಯಲ್ಲಿ ಕಾಳಿಂಗ ಸರ್ಪ ಕಂಡುಬಂದಿತ್ತು. ಇದೀಗ ಎರಡನೇ ಬಾರಿ ಬಂಟ್ವಾಳದಲ್ಲಿ ಕಾಳಿಂಗ ಸರ್ಪ ಕಾಣಸಿಕ್ಕಿದ್ದು, ಎರಡು ತಿಂಗಳಿನಿಂದ ಗ್ರಾಮದ ಜನರ ನಿದ್ದೆಗೆಡಿಸಿತ್ತು. ಗ್ರಾಮದ ವಿವಿಧೆಡೆಗಳಲ್ಲಿ ಕಂಡುಬಂದು, ಗ್ರಾಮಸ್ಥರು ಬಹಳಷ್ಟು ಭಯಗೊಂಡಿದ್ದರು.
ಇದನ್ನೂ ಓದಿ: ಪುತ್ತೂರು: ಮನೆಯಲ್ಲಿ ಅಪರೂಪದ 'ಫಾರ್ಸ್ಟೆನ್ ಕ್ಯಾಟ್ ಸ್ನೇಕ್' ಪತ್ತೆ