Snake in Shoe: ಶೂ ಒಳಗೆ ಅವಿತು ಕುಳಿತಿದ್ದ ಮರಿ ನಾಗರ ಹಾವು ರಕ್ಷಣೆ.. ವಿಡಿಯೋ - ಉರಗ ರಕ್ಷಕ ಯಲ್ಲಪ್ಪ ಜೋಡಳ್ಳಿ
🎬 Watch Now: Feature Video
ಧಾರವಾಡ: ಶೂ ಒಳಗಡೆ ಬೆಚ್ಚಗೆ ಅವಿತು ಕುಳಿತಿದ್ದ ನಾಗರ ಹಾವಿನ ಮರಿಯನ್ನು ರಕ್ಷಣೆ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಹೊಸಯಲ್ಲಾಪುರದ ಮೇದಾರ ಓಣಿಯ ನಂದಿತಾ ಶಿವನಗೌಡರ ಎಂಬವರ ಮನೆಯಲ್ಲಿ ಹಾವು ಪತ್ತೆಯಾಗಿದೆ. ಮನೆಯ ಮುಂದೆ ಇಟ್ಟಿದ್ದ ಶೂ ಒಳಗೆ ಮರಿ ನಾಗರ ಹಾವು ಬೆಚ್ಚಗೆ ಅವಿತು ಕುಳಿತಿತ್ತು. ಮನೆ ಮುಂದೆ ಕಸ ಗುಡಿಸುವ ಸಂದರ್ಭ ನಂದಿತಾ ಅವರು ಶೂ ಒಳಗೆ ಹಾವು ಇರುವುದನ್ನು ಗಮನಿಸಿದ್ದಾರೆ.
ಹಾವು ನೋಡಿದ ನಂದಿತಾ ಅವರು ಕೂಡಲೇ ಉರಗ ರಕ್ಷಕ ಯಲ್ಲಪ್ಪ ಜೋಡಳ್ಳಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಯಲ್ಲಪ್ಪ ಜೋಡಳ್ಳಿ ಮರಿ ನಾಗರ ಹಾವನ್ನು ರಕ್ಷಣೆ ಮಾಡಿದ್ದಾರೆ. ಶೂ ಹಾಕಿಕೊಳ್ಳುವಾಗ ಎಚ್ಚರಿಕೆ ವಹಿಸುವಂತೆ ಉರಗ ರಕ್ಷಕ ಯಲ್ಲಪ್ಪ ಮನವಿ ಮಾಡಿಕೊಂಡಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಖಂಡಿತ. ಹೀಗಾಗಿ ಶೂ ಧರಿಸುವಾಗ ಸ್ವಲ್ಪ ಜಾಗರೂಕತೆ ವಹಿಸಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ನೋಡಿ: ಪಾರಿವಾಳದ ಗೂಡಿನಲ್ಲಿ ಕುಳಿತು ಬುಸ್ಗುಟ್ಟಿದ ನಾಗಪ್ಪ... ಉರಗ ತಜ್ಞರಿಂದ ರಕ್ಷಣೆ - ವಿಡಿಯೋ