ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ ಹಿನ್ನೆಲೆ: ಕಲಾವಿದನ ಕೈಯಲ್ಲಿ ಅರಳಿದ ಕಲಾಕೃತಿ - ಕಲ್ಮೇಶ್ವರ ದೇವಸ್ಥಾನದಲ್ಲಿರಿಸಿ ಮೌನಾಚರಣೆ
🎬 Watch Now: Feature Video
ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ ಹಿನ್ನೆಲೆ ಧಾರವಾಡದ ಪರಿಸರ ಪ್ರೇಮಿ ಕಲಾವಿದ ಮಂಜುನಾಥ ಹಿರೇಮಠ ಅವರು ವಿಶೇಷ ಗೌರವ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಧಾರವಾಡದ ಪರಿಸರ ಪ್ರೇಮಿ ಕಲಾವಿದ ಮಂಜುನಾಥ ಹಿರೇಮಠ ಎರಡು ಅಡಿಯಲ್ಲಿ ಸಿದ್ದೇಶ್ವರ ಸ್ವಾಮೀಜಿ ಮೂರ್ತಿ ತಯಾರಿಸಿದ್ದಾರೆ. ಗಣಪತಿ ಮೂರ್ತಿ ತಯಾರಿಸುವ ಜೇಡಿ ಮಣ್ಣಿನಿಂದ ಎರಡು ಅಡಿ ಕಲಾಕೃತಿ ತಯಾರಿಸಿ ಗೌರವ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಬಳಿಕ ಆ ಕಲಾಕೃತಿಯನ್ನು ಕೆಲಗೇರಿ ನಿವಾಸಿಗಳು ಕಲ್ಮೇಶ್ವರ ದೇವಸ್ಥಾನದಲ್ಲಿರಿಸಿ ಮೌನಾಚರಣೆ ಸಲ್ಲಿಸಿ ಸಿದ್ದೇಶ್ವರ ಶ್ರೀಗಳ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
Last Updated : Feb 3, 2023, 8:38 PM IST