ಗೋಡ್ಸೆ, ಸಾವರ್ಕರ್ ಬೆಂಬಲಿಗರಿಂದ ನಮಗೆ ಪಾಠ ಬೇಕಿಲ್ಲ: ಅಮಿತ್ ಶಾಗೆ ಸಿದ್ದರಾಮಯ್ಯ ಟಾಂಗ್ - ಈಟಿವಿ ಭಾರತ ಕನ್ನಡ
🎬 Watch Now: Feature Video
ವಿಜಯಪುರ: ಕಾಂಗ್ರೆಸ್, ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು ಎಂಬ ಅಮಿತ್ ಷಾ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ರಾಷ್ಟ್ರ, ಸಂವಿಧಾನದ ಮೇಲೆ ನಂಬಿಕೆ ಇಟ್ಟುಕೊಂಡಿರುವ ಪಕ್ಷ. ಬಿಜೆಪಿಯು ಸಂವಿಧಾನದ ಮೇಲೆ ನಂಬಿಕೆ ಇಲ್ಲದ, ಗೌರವ ನೀಡದ ಪಕ್ಷ. ಜೆಡಿಎಸ್ ಜಾತ್ಯಾತೀತ ಪಕ್ಷವಾಗಿದ್ದು, ಒಂದಾಗಲು ಹೇಗೆ ಸಾಧ್ಯ? ಬಿಜೆಪಿ ಜೆಡಿಎಸ್ ಸೇರಿ ಸರ್ಕಾರ ಮಾಡಿದ್ರಲ್ವಾ?" ಎಂದು ತಿರುಗೇಟು ನೀಡಿದರು.
ಟಿಪ್ಪು ಸುಲ್ತಾನ್ ಆರಾಧನೆ ಮಾಡುವ ಕಾಂಗ್ರೆಸ್ಗೆ ಮತ ಹಾಕಬೇಡಿ ಎಂಬ ಅಮಿತ್ ಶಾ ಹೇಳಿಕೆ ವಿಚಾರವಾಗಿ ಮಾತನಾಡಿ, "ಗೋಡ್ಸೆ, ಸಾವರ್ಕರ್ ಪೂಜೆ ಮಾಡುವವರು ನಮಗೇನು ಪಾಠ ಹೇಳಿಕೊಡ್ತಾರೆ? ಬಿಜೆಪಿಯು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕೊಂದವರನ್ನು ಪೂಜಿಸುವ ಪಕ್ಷವಾಗಿದೆ. ಸಾವರ್ಕರ್ ಬ್ರಿಟಿಷ್ ಸರ್ಕಾರದಲ್ಲಿ ಪೆನ್ಷನ್ ತಗೊಳ್ತಾ ಇದ್ರು. ಅವರ ಬಗ್ಗೆ ಮಾತನಾಡಲು ಆಗುತ್ತಾ?" ಎಂದು ಲೇವಡಿ ಮಾಡಿದರು.
ಕಿತ್ತೂರು ರಾಣಿ ಚೆನ್ನಮ್ಮಾಗೆ ಎಂದಾದರೂ ಗೌರವ ಕೊಟ್ಟಿದ್ದೀರಾ? ಎಂಬ ಬಿಜೆಪಿ ನಾಯಕರ ಪ್ರಶ್ನೆಗೆ ಉತ್ತರಿಸಿದ ಅವರು, "ಟಿಪ್ಪು ಸುಲ್ತಾನ್ ಓರ್ವ ದೇಶಪ್ರೇಮಿ ಎಂಬ ನಂಬಿಕೆ ನಮಗಿದೆ. ಅವರ ಜೊತೆಗೆ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಝಾನ್ಸಿರಾಣಿ , ಒನಕೆ ಓಬವ್ವ, ಬೆಳವಾಡಿ ಮಲ್ಲಮ್ಮ, ಅಬ್ಬಕ್ಕ ಇವರೆಲ್ಲರೂ ದೇಶ ಪ್ರೇಮಿಗಳೇ" ಎಂದರು.
ಇದನ್ನೂ ಓದಿ: ಮಹಾರಾಜಗೋಪುರ ನಿರ್ಮಾಣ: ಶೃಂಗೇರಿಯಲ್ಲಿ ಮಹಾಕುಂಭಾಭಿಷೇಕ- ವಿಡಿಯೋ