ಮುಂದುವರೆದ ಸಿಎಂ ಆಯ್ಕೆ ಕಸರತ್ತು: ವೇಣುಗೋಪಾಲ್​ ಭೇಟಿಯಾದ ಸಿದ್ದರಾಮಯ್ಯ - ಈಟಿವಿ ಭಾರತ ಕನ್ನಡ

🎬 Watch Now: Feature Video

thumbnail

By

Published : May 17, 2023, 10:53 PM IST

ನವದೆಹಲಿ : ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​​ ಸ್ಪಷ್ಟ ಬಹುಮತದೊಂದಿಗೆ ಗೆದ್ದಿದ್ದರೂ, ಇನ್ನೊಂದೆಡೆ ಸಿಎಂ ಆಯ್ಕೆ ವಿಚಾರ ಕಗ್ಗಂಟಾಗಿ ಉಳಿದಿದೆ. ಕಳೆದ ಮೂರು ದಿನಗಳಿಂದ ಹೈಕಮಾಂಡ್​​ ಸಿಎಂ ಆಯ್ಕೆ ವಿಚಾರವಾಗಿ ಚರ್ಚೆ ನಡೆಸುತ್ತಿದ್ದರೂ, ಇನ್ನೂ ಕೂಡ ಸಿಎಂ ಆಯ್ಕೆ ವಿಚಾರ ಪೂರ್ಣಗೊಂಡಿಲ್ಲ. ಈ ನಡುವೆ ಸಿಎಂ ಸ್ಥಾನದ ಆಕಾಂಕ್ಷಿಗಳಾದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಅವರು ಪಕ್ಷದ ವರಿಷ್ಠರೊಂದಿಗೆ ಮಾತಕತೆ ನಡೆಸುತ್ತಿದ್ದಾರೆ.

ಬೆಳಗ್ಗೆಯಿಂದಲೂ ಸಿಎಂ ಆಯ್ಕೆ ಕುರಿತು ಹೈಕಮಾಂಡ್​​ ಮಟ್ಟದಲ್ಲಿ ಸಭೆ ನಡೆಯುತ್ತಿದ್ದರೂ ಸಿಎಂ ಆಯ್ಕೆ ಬಿಕ್ಕಟ್ಟು ಇನ್ನು ಬಗೆಹರಿದಿಲ್ಲ. ಈ ನಡುವೆ  ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ತಾವು ತಂಗಿದ್ದ ಹೋಟೆಲ್​​ನಿಂದ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್​ ಅವರನ್ನು ಭೇಟಿ ಮಾಡಲು ತೆರಳಿದ್ದಾರೆ. ಇದೇ ವೇಳೆ, ಕೆ.ಸಿ ವೇಣುಗೋಪಾಲ್​ ಅವರು ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದೆಹಲಿಯ ನಿವಾಸಕ್ಕೆ ಭೇಟಿ ನೀಡಿದ್ದು, ಸಿಎಂ ಆಯ್ಕೆ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೂ ಮೊದಲು ಡಿ.ಕೆ ಶಿವಕುಮಾರ್​ ಅವರು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೇವಾಲ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು.

ಇದನ್ನೂ ಓದಿ : ಖರ್ಗೆ, ರಾಹುಲ್ ಬಳಿಕ ಸುರ್ಜೇವಾಲ ನಿವಾಸದಲ್ಲಿ ಡಿಕೆಶಿ ಸಭೆ: ವಿಡಿಯೋ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.