'ಶಿಳ್ಳೇಕ್ಯಾತ, ಕಿಳ್ಳೇಕ್ಯಾತ ಬೇರೆ ಬೇರೆ ಅಲ್ಲ; ಎರಡೂ ಸೇರಿಸಿ ಎಸ್‌ಸಿ ಮೀಸಲಾತಿ ಕೊಡಿ'
🎬 Watch Now: Feature Video
Published : Dec 5, 2023, 8:08 PM IST
ಬೆಳಗಾವಿ: ರಾಜ್ಯದಲ್ಲಿರುವ ಶಿಳ್ಳೇಕ್ಯಾತ ಹಾಗೂ ಕಿಳ್ಳೇಕ್ಯಾತ ಜಾತಿಗಳನ್ನು ಬೇರ್ಪಡಿಸದೇ ಎರಡನ್ನೂ ಜೋಡಿ ಪದ ಎಂದು ನಮೂದಿಸಿ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ರಾಜ್ಯ ಶಿಳ್ಳೇಕ್ಯಾತ-ಕಿಳ್ಳೇಕ್ಯಾತ ಅಭಿವೃದ್ಧಿ ಸಂಘದ ವತಿಯಿಂದ ಇಂದು ಬೆಳಗಾವಿಯ ಸುವರ್ಣ ಗಾರ್ಡನ್ ಸಮೀಪ ಪ್ರತಿಭಟನೆ ನಡೆಯಿತು.
ಉತ್ತರ ಕರ್ನಾಟಕದಲ್ಲಿ ಕಿಳ್ಳೇಕ್ಯಾತರೆಂದು ಹಾಗೂ ದಕ್ಷಿಣ ಕರ್ನಾಟಕದಲ್ಲಿ ಶಿಳ್ಳೇಕ್ಯಾತರೆಂದು ಜನ ನಮ್ಮನ್ನು ಗುರುತಿಸಿದ್ದಾರೆ. ಆದರೆ ಸರ್ಕಾರ ಎರಡನ್ನೂ ಬೇರ್ಪಡಿಸಿದ್ದರಿಂದ ಸೌಲಭ್ಯದಿಂದ ನಾವು ವಂಚಿತರಾಗಿದ್ದೇವೆ. ಕಿಳ್ಳೇಕ್ಯಾತ ಪದವನ್ನು ಹಿಂದುಳಿದ ವರ್ಗದ ಪಟ್ಟಿಯಲ್ಲಿ (ಬುಡಬುಡಕಿ ಸಮಾನವಾಗಿ) ಸೇರಿಸಿ ಶಿಳ್ಳೇಕ್ಯಾತ ಪದವನ್ನು ಪರಿಶಿಷ್ಟ ಜಾತಿಯಲ್ಲಿ ಇರಿಸಿದೆ. ಒಂದೇ ಪದವಿದ್ದರೂ ಎಸ್‌ಸಿ ಮೀಸಲಾತಿಯ ಸೌಲಭ್ಯ ಸಿಗುತ್ತಿಲ್ಲ ಎಂದು ಹೇಳಿದರು.
'ಈಟಿವಿ ಭಾರತ'ದ ಜೊತೆಗೆ ಪ್ರತಿಭಟನಾಕಾರ ಮಂಜುನಾಥ್ ಮಾತನಾಡಿ, "1978ರಲ್ಲಿ ಶಿಳ್ಳೇಕ್ಯಾತ-ಕಿಳ್ಳೇಕ್ಯಾತ ಎಂದು ಜಾತಿ ನಮೂದಿಸಿರುವ ಸರ್ಕಾರದ ಆದೇಶ ಇದ್ದರೂ ಸಮಾಜದಲ್ಲಿನ ಶಿಕ್ಷಣ, ಸಂಘಟನೆಯ ಕೊರತೆಯಿಂದ ಸೌಲಭ್ಯದಿಂದ ವಂಚಿತರಾಗಿದ್ದೇವೆ. ನೂರಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಈಗಲೂ ನಮ್ಮ ಬೇಡಿಕೆ ಈಡೇರಿಸದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ" ಎಂದು ಎಚ್ಚರಿಸಿದರು.
ಇದನ್ನೂ ಓದಿ: ಮಡಿವಾಳ ಸಮಾಜಕ್ಕೆ ಎಸ್‌ಸಿ ಮೀಸಲಾತಿ ನೀಡದಿದ್ದರೆ ಆತ್ಮಹತ್ಯೆ: ಪ್ರತಿಭಟನಾಕಾರರ ಎಚ್ಚರಿಕೆ