ಬೆಂಗಳೂರು: ಸರಣಿ ರಸ್ತೆ ಅಪಘಾತ, ಇಬ್ಬರಿಗೆ ಗಾಯ - ಸರಣಿ ಅಪಘಾತ

🎬 Watch Now: Feature Video

thumbnail

By ETV Bharat Karnataka Team

Published : Jan 12, 2024, 9:58 AM IST

ಬೆಂಗಳೂರು: ನೆಲಮಂಗಲ ತಾಲೂಕಿನ ಸೋಂಪುರದಿಂದ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 48ರ ಎಡೇಹಳ್ಳಿ ಬಳಿ ಗುರುವಾರ ಸಂಜೆ ಸರಣಿ ಅಪಘಾತ ಸಂಭವಿಸಿದ್ದು, ಇಬ್ಬರು ಗಾಯಗೊಂಡಿದ್ದಾರೆ. ತುಮಕೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಮತ್ತು ಬೆಂಗಳೂರಿನಿಂದ ತುಮಕೂರಿನೆಡೆಗೆ ಸಂಚರಿಸುತ್ತಿದ್ದ 2 ಕಾರು, 1 ಕೆ.ಎಸ್.ಆರ್.ಟಿ.ಸಿ ಬಸ್, 1 ಕ್ಯಾಂಟರ್ ಹಾಗು 1 ಟಾಟಾ ಏಸ್ ನಡುವೆ ಅಪಘಾತ ಜರುಗಿದೆ. 

ಅತಿ ವೇಗದ ಚಾಲನೆ ಘಟನೆಗೆ ಕಾರಣ ಎನ್ನಲಾಗಿದೆ. ಸುಮಾರು 2 ಕಿ.ಮೀ.ವರೆಗೆ ವಾಹನದಟ್ಟನೆ ಉಂಟಾಗಿತ್ತು. ಹೆದ್ದಾರಿ ಪೊಲೀಸರು ಮತ್ತು ದಾಬಸ್‌ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ನೆಲಮಂಗಲ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮೆಹಬೂಬಾ ಮುಫ್ತಿ ಅಪಘಾತದಿಂದ ಪಾರು: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಗುರುವಾರ ನಡೆಯಿತು. ಮುಫ್ತಿ ಸೇರಿ ವಾಹನದಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಇದನ್ನೂ ಓದಿ: ಕಾರು ಅಪಘಾತ: ಮೆಹಬೂಬಾ ಮುಫ್ತಿ ಪ್ರಾಣಾಪಾಯದಿಂದ ಪಾರು

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.