ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಸೈಯದ್ ಕಿರ್ಮಾನಿ, ಜಾಂಟಿ ರೋಡ್ಸ್ ಪಯಣ: ವಿಡಿಯೋ - ಸೈಯದ್ ಕಿರ್ಮಾನಿ
🎬 Watch Now: Feature Video
Published : Nov 9, 2023, 5:20 PM IST
ನವದೆಹಲಿ: ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಹಿರಿಯ ಕ್ರಿಕೆಟಿಗರಾದ ಸೈಯದ್ ಕಿರ್ಮಾನಿ ಮತ್ತು ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್ ಇಂದು ಪ್ರಯಾಣಿಸಿದರು. ಮಧ್ಯಪ್ರದೇಶದ ಭೋಪಾಲ್‌ನಿಂದ ರಾಷ್ಟ್ರ ರಾಜಧಾನಿ ದೆಹಲಿಯ ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಕ್ಕೆ ವಂದೇ ಭಾರತ್ ರೈಲಿನಲ್ಲಿ ಇಬ್ಬರು ಒಟ್ಟಿಗೆ ಆಗಮಿಸಿದರು. ರೈಲ್ವೆ ಅಧಿಕಾರಿಗಳಿಂದ ಸ್ವಾಗತ ಕೋರಲಾಯಿತು.
ಇಂದು ಬೆಳಗ್ಗೆ ಭೋಪಾಲ್‌ನಿಂದ ಸೈಯದ್ ಕಿರ್ಮಾನಿ ಮತ್ತು ಜಾಂಟಿ ರೋಡ್ಸ್ ವಂದೇ ಭಾರತ್ ರೈಲು ಹತ್ತಿದ್ದರು. ಮಧ್ಯಾಹ್ನ 1 ಗಂಟೆಗೆ ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣವನ್ನು ಎಕ್ಸ್ಪ್ರೆಸ್ ರೈಲು ತಲುಪಿತು. ಹಿರಿಯ ಕ್ರಿಕೆಟಿಗರು ಆಗಮಿಸುತ್ತಿರುವ ವಿಷಯ ತಿಳಿದ ರೈಲ್ವೆ ಅಧಿಕಾರಿಗಳು ರೈಲ್ವೆ ನಿಲ್ದಾಣದಲ್ಲಿ ಹಾಜರಿದ್ದು, ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ, ಇಬ್ಬರು ಕೂಡ ವಂದೇ ಭಾರತ್ ರೈಲಿನಲ್ಲಿನ ಉತ್ತಮ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟ್ರೋಫಿ ಟೂರ್ಗಾಗಿ ಭಾರತೀಯ ರೈಲ್ವೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. 17 ರಾಜ್ಯಗಳ 50 ನಗರಗಳಲ್ಲಿ ಸಂಚರಿಸಲಾಗುತ್ತದೆ.
ಭಾರತದ ಮಾಜಿ ಕ್ರಿಕೆಟಿಗ ಕಿರ್ಮಾನಿ ಮಾತನಾಡಿ, ಪ್ರಸ್ತುತ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡದ ಪ್ರದರ್ಶನ ಉತ್ತಮವಾಗಿದ್ದು, ಈ ಬಾರಿ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಪ್ರತಿಕ್ರಿಯಿಸಿ, ವಿಶ್ವಕಪ್ ಉತ್ತಮ ಪಂದ್ಯಾವಳಿ. ಟೂರ್ನಿಯನ್ನು ಭಾರತವು ಉತ್ತಮವಾಗಿ ಆಯೋಜಿಸಿದೆ. ಕ್ರಿಕೆಟ್ ಎಂದರೆ ಒಂದು ತಂಡವಾಗಿರಲಿ ಅಥವಾ ವೈಯಕ್ತಿಕವಾಗಿರಲಿ ಅದೊಂದು ಅದ್ಭುತ. ಸದ್ಯ ಅಲ್ಲಿಂದ ಟೂರ್ನಿಯು ಹೆಚ್ಚು ಕಠಿಣವಾಗಲಿದೆ. ಏಕೆಂದರೆ, ಪ್ರತಿಯೊಬ್ಬರಿಗೆ ಒಂದೇ ಅವಕಾಶ ಸಿಗಲಿದೆ. ಇದನ್ನು ಸುದುಪಯೋಗ ಪಡಿಸಿಕೊಂಡವರು ಮತ್ತಷ್ಟು ಎತ್ತರಕ್ಕೆ ಹೋಗುತ್ತಾರೆ ಎಂದರು.