ಸವದತ್ತಿ ಯಲ್ಲಮ್ಮ ದೇವಿಗೆ 'ತಿರಂಗಾ' ಶೃಂಗಾರ- ವಿಡಿಯೋ - ಯಲ್ಲಮ್ಮ ದೇವಿಗೆ ತಿರಂಗಾ ಸೀರೆ ಅಲಂಕಾರ
🎬 Watch Now: Feature Video
ಬೆಳಗಾವಿ: ಜಿಲ್ಲೆಯಾದ್ಯಂತ ಇಂದು 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಉತ್ತರ ಕರ್ನಾಟಕದ ಶಕ್ತಿ ದೇವತೆ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ತ್ರಿವರ್ಣ ಧ್ವಜದ ಸೀರೆಗಳಿಂದ ಶೃಂಗರಿಸಿದ್ದು ವಿಶೇಷವಾಗಿತ್ತು.
ಕೇಸರಿ, ಬಿಳಿ, ಹಸಿರು ಬಣ್ಣದ ಸೀರೆಗಳನ್ನು ಬಳಸಿ ದೇವಿಯ ಮೂರ್ತಿಯನ್ನು ಅಲಂಕರಿಸಲಾಗಿತ್ತು. ಹೀಗಾಗಿ, ದೇವಸ್ಥಾನದಲ್ಲಿ ದೇಶಭಕ್ತಿ ಮೇಳೈಸಿತು. ಇಂದು ಸಾರ್ವತ್ರಿಕ ರಜೆ ಹಿನ್ನೆಲೆಯಲ್ಲಿ ಯಲ್ಲಮ್ಮ ಗುಡ್ಡಕ್ಕೆ ಭಕ್ತರ ದಂಡೇ ಹರಿದುಬಂದಿತ್ತು. ಸರತಿ ಸಾಲಿನಲ್ಲಿ ನಿಂತು ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು.
ಕಿಲ್ಲಾ ಕೆರೆಯಲ್ಲಿ ಹಾರಾಡಿದ ದೊಡ್ಡ ಧ್ವಜ: ದೇಶದ ಅತಿ ದೊಡ್ಡದಾದ, 110 ಮೀಟರ್ ಎತ್ತರದ ಧ್ವಜಸ್ತಂಭ ಇರುವ ಬೆಳಗಾವಿಯ ಕೋಟೆ ಕೆರೆ ಆವರಣದಲ್ಲಿ ಇಂದು ಬೆಳಿಗ್ಗೆ ಉತ್ತರ ಶಾಸಕ ರಾಜು ಸೇಠ್ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮೇಯರ್ ಶೋಭಾ ಸೋಮನಾಚೆ, ಉಪಮೇಯರ್ ರೇಷ್ಮಾ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಸೇರಿ ಮತ್ತಿತರರು ಇದ್ದರು.
ಇದನ್ನೂ ಓದಿ: ಭಾರತದಾದ್ಯಂತ ಸ್ವಾತಂತ್ರ್ಯ ದಿನಾಚಾರಣೆ.. ಸಂಭ್ರಮಕ್ಕೂ ಮುನ್ನ ತ್ರಿರಂಗಗಳಲ್ಲಿ ಕಂಗೊಳಿಸಿದ ಐತಿಹಾಸಿಕ, ಸರ್ಕಾರಿ ಕಟ್ಟಡಗಳು