ಪುಕ್ಕಟೆಯಾಗಿ ಸುದೀಪ್ ನೋಡುತ್ತಿದ್ದೇವೆ, ಅವರು 3 ತಾಸಿನ ನಾಯಕ: ಸತೀಶ್ ಜಾರಕಿಹೊಳಿ - Actor Sudeep
🎬 Watch Now: Feature Video
ಚಾಮರಾಜನಗರ : ಬಹಿರಂಗ ಪ್ರಚಾರದ ಕೊನೆ ದಿನವಾದ ಇಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭರ್ಜರಿ ಪ್ರಚಾರ ನಡೆಸಿದರು.
ಇದನ್ನೂ ಓದಿ: 'ನಾವು ಜಾತಿ, ಧರ್ಮದ ರಾಜಕಾರಣ ಮಾಡಲ್ಲ, ಪ್ರಣಾಳಿಕೆ ಅಕ್ಷರಶಃ ಜಾರಿ ಮಾಡುತ್ತೇವೆ'
ಸತೀಶ್ ಜಾರಕಿಹೊಳಿ ತಮ್ಮ ಭಾಷಣದಲ್ಲಿ ಚಿತ್ರನಟ ಸುದೀಪ್ ವಿರುದ್ಧ ಅಸಮಾಧಾನ ಹೊರಹಾಕಿ, ಹಣ ಕೊಟ್ಟು ಅವರನ್ನು ನೋಡುತ್ತಿದ್ದೆವು, ಈಗ ಪುಕ್ಕಟ್ಟೆಯಾಗಿ ನೋಡುತ್ತಿದ್ದೇವೆ. ಸಿನಿಮಾದಲ್ಲಿ ಅಳಲು-ನಗಲು ದುಡ್ಡು ತೆಗೆದುಕೊಳ್ಳುತ್ತಾರೆ. ಜನ ಸೇವೆ ಮಾಡುವವರಲ್ಲ, ಅವರು 3 ತಾಸಿನ ನಾಯಕರು ಎಂದು ಟೀಕಿಸಿದರು.
ಇದನ್ನೂ ಓದಿ: ವರುಣಾದಲ್ಲಿ ಸಿದ್ದರಾಮಯ್ಯಗೆ ಸೋಲು, ಕನಕಪುರದಲ್ಲಿ ಡಿಕೆಶಿಗೆ ಟೆನ್ಷನ್: ನಳಿನ್ ಕುಮಾರ್ ಕಟೀಲ್
ನಿರಂತರವಾಗಿ ಜೊತೆಗಿರುವ ನಾಯಕರು ನಾವು. ಮಳೆ-ಬಿಸಿಲಲ್ಲಿ ನಿಮ್ಮ ಸೇವೆ ಮಾಡುವವರು ನಾವು. ಅವರು ಬಂದರು ಎಂಬುದು ಪರಿಹಾರ ಅಲ್ಲ, ಗಣೇಶ್ ಪ್ರಸಾದ್ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಇತ್ತೀಚಿಗಷ್ಟೇ ನಟ ಸುದೀಪ್ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿ ಧೂಳೆಬ್ಬಿಸಿದ್ದರು.
ಇದನ್ನೂ ಓದಿ: ಶಿಕಾರಿಪುರದಲ್ಲಿ ವಿಜಯೇಂದ್ರ ಪರ ಕಿಚ್ಚ ಸುದೀಪ್ ರೋಡ್ ಶೋ- ವಿಡಿಯೋ