ಜಾಗಿಂಗ್ನಲ್ಲಿ ರೈತನ ಮೇವಿನ ಗಾಡಿ ತಳ್ಳಿ ಸಹಾಯ ಮಾಡಿದ ಸಂತೋಷ್ ಲಾಡ್: ಸಾರ್ವಜನಿಕರಿಂದ ಮೆಚ್ಚುಗೆ
🎬 Watch Now: Feature Video
ಹುಬ್ಬಳ್ಳಿ: ಕಲಘಟಗಿ ಕ್ಷೇತ್ರದ ಶಾಸಕ ಹಾಗೂ ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರ ಸರಳತೆ ಹಾಗೂ ಮಾನವೀಯತೆಯ ಮತ್ತೊಂದು ವಿಡಿಯೋ ಈಗ ವೈರಲ್ ಆಗಿದೆ. ಕಲಘಟಗಿ ತಾಲೂಕಿನ ಮಡಕಿಹೊನ್ನಳ್ಳಿ ಗ್ರಾಮದಲ್ಲಿ ನಿನ್ನೆ ರೈತ ದಂಪತಿ ಹೊಲದಿಂದ ಮೇವಿನಗಾಡಿಯಲ್ಲಿ ಹುಲ್ಲು ತೆಗೆದುಕೊಂಡು ಹೋಗುತ್ತಿದ್ದರು.
ಇದೇ ವೇಳೆ, ಕಲಘಟಗಿಯ ತಮ್ಮ ಅಮೃತ ನಿವಾಸದಿಂದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಜಾಗಿಂಗ್ ಮಾಡಲು ತೆರಳಿದ್ದರು. ನಂತರ ರಸ್ತೆಯಲ್ಲಿ ರೈತರನ್ನು ಕಂಡು ಆ ರೈತಗಾಡಿ ತಳ್ಳುವುದನ್ನು ಬಿಡಿಸಿ ತಾವೇ ಗಾಡಿಯನ್ನು ತಳ್ಳಿಕೊಂಡು ಹೋಗಿ ರೈತರ ಮನೆಯವರೆಗೂ ತಲುಪಿಸಿದ್ದಾರೆ. ಇದು ಕಲಘಟಗಿ ಕ್ಷೇತ್ರದ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಅಪಘಾತದಲ್ಲಿ ಬೈಕ್ ಸವಾರನಿಗೆ ತೀವ್ರ ಗಾಯ.. ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಶಾಸಕ ಆರಗ ಜ್ಞಾನೇಂದ್ರ
ಸುಮಾರು 1 ಕಿಲೋ ಮೀಟರ್ನಷ್ಟು ದೂರ ತಳ್ಳಿಕೊಂಡು ಬಂದು ಸಹಾಯ ಮಾಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಅವರ ಸರಳತೆಯನ್ನು ಕಂಡು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕುಣಿಗಲ್ ಶಾಸಕ ಡಾ.ರಂಗನಾಥ್ ಅವರಿಂದ ಬಡ ಮಹಿಳೆಗೆ ಉಚಿತ ಶಸ್ತ್ರಚಿಕಿತ್ಸೆ: ವಿಡಿಯೋ