ಸಫಾರಿ ವಾಹನಗಳನ್ನ ಕಂಡು ದಿಕ್ಕು ತೋಚದೇ ಕಕ್ಕಾಬಿಕ್ಕಿಯಾದ ಹುಲಿ: ವಿಡಿಯೋ - Dammanakatte Kakanakote Safari Center
🎬 Watch Now: Feature Video
ಮೈಸೂರು : ಸಫಾರಿ ವಾಹನಗಳಿಂದ ಕೆಲಕಾಲ ಹುಲಿ ಸಂಚಾರಕ್ಕೆ ಅಡ್ಡಿಯಾದ ಪ್ರಸಂಗ ನಡೆಯಿತು. ಈ ವೇಳೆ ಹುಲಿ ದಾರಿ ತೋಚದೇ ಗೊಂದಲಕ್ಕೀಡಾದ ಘಟನೆ ಜಿಲ್ಲೆಯ ಹೆಚ್ ಡಿ ಕೋಟೆ ಬಳಿಯ ದಮ್ಮನಕಟ್ಟೆ ಸಫಾರಿ ಕೇಂದ್ರದ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಹೇರಳವಾಗಿ ಕಾಡು ಪ್ರಾಣಿಗಳ ದರ್ಶನ ಸಿಗುವ ಸಫಾರಿ ಕೇಂದ್ರಗಳಲ್ಲಿ ಒಂದಾದ ಹೆಚ್ ಡಿ ಕೋಟೆ ಬಳಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ದಮ್ಮನಕಟ್ಟೆ ಸಫಾರಿ ಕೇಂದ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಈ ಸಫಾರಿ ಜೀಪ್ಗಳಿಂದ ಕೆಲವೊಮ್ಮೆ ಕಾಡು ಪ್ರಾಣಿಗಳ ಸ್ವತಂತ್ರ ಚಲನವಲನಕ್ಕೆ ಕಿರಿಕಿರಿ ಉಂಟಾಗುತ್ತಿದೆ.
ಇದನ್ನೂ ಓದಿ: Tiger hunts Bison: ಗೋಪಾಲಸ್ವಾಮಿ ಬೆಟ್ಟದಲ್ಲಿ ಮಳೆ ನಡುವೆ ಕಾಡೆಮ್ಮೆ ಬೇಟೆಯಾಡಿದ ಹುಲಿ- ವಿಡಿಯೋ
ಇದಕ್ಕೆ ನಿದರ್ಶನ ಎಂಬಂತೆ ಕಾಡಿನಲ್ಲಿ ಹುಲಿಯೊಂದು ಸಂಚರಿಸುತ್ತಿದ್ದು, ಅದನ್ನು ನೋಡಲು ಐದಕ್ಕೂ ಹೆಚ್ಚು ಸಫಾರಿ ವಾಹನಗಳು ರಸ್ತೆಯಲ್ಲೇ ಸುತ್ತುವರಿದು ನಿಂತಿದ್ದವು. ಈ ಸಂದರ್ಭದಲ್ಲಿ ಹುಲಿ ಯಾವ ಕಡೆ ಹೋಗಬೇಕು ಎಂದು ದಿಕ್ಕು ತೋಚದೇ ಕಕ್ಕಾಬಿಕ್ಕಿಯಾಗಿ ನಿಂತಿತ್ತು. ಕೊನೆಗೆ ಆ ಕಡೆ ಈ ಕಡೆ ಹೆಜ್ಜೆ ಹಾಕಿ, ಒಂದು ಸುತ್ತು ಕಣ್ಣಾಯಿಸಿ ಕಾಡಿನತ್ತ ಹೆಜ್ಜೆ ಹಾಕಿದೆ. ಈ ಅಪರೂಪದ ದೃಶ್ಯವನ್ನು ಸಫಾರಿಯಲ್ಲಿದ್ದ ಪ್ರವಾಸಿಗ ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದಿದು, ವಿಡಿಯೋ ವೈರಲ್ ಆಗುತ್ತಿದೆ.
ಇದನ್ನೂ ಓದಿ: Tiger viral video: ಮಳೆ ನೀರು ಕುಡಿದು ದಣಿವಾರಿಸಿಕೊಂಡ ವ್ಯಾಘ್ರ: ಬಂಡೀಪುರದಲ್ಲಿ ಸೆರೆಸಿಕ್ಕ ದೃಶ್ಯ ನೋಡಿ