75 ವರ್ಷದವರಿಗೂ ಟಿಕೆಟ್ ಕೊಡುವ ಸೂಚನೆ ನೀಡಿದ್ದಾರೆ: ಚುನಾವಣೆಗೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ ರವೀಂದ್ರನಾಥ - ಬಿಜೆಪಿ ಶಾಸಕ ಎಸ್ ಎ ರವೀಂದ್ರನಾಥ
🎬 Watch Now: Feature Video
ದಾವಣಗೆರೆ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಎ ರವೀಂದ್ರನಾಥ ಅವರು ಚುನಾವಣೆಗೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದು, ಟಿಕೆಟ್ ಆಕಾಂಕ್ಷಿಗಳಿಗೆ ನಡುಕ ಶುರುವಾಗಿದೆ. ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವರು, '75 ವರ್ಷ ವಯಸ್ಸಾದ ಹಿನ್ನೆಲೆಯಲ್ಲಿ ಟಿಕೆಟ್ ಕೊಡಲ್ಲ ಎಂಬ ಕಾರಣಕ್ಕೆ 2023 ರ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕಿದ್ದೆ. ಆದ್ರೆ, ಇದೀಗ ಪಕ್ಷದಲ್ಲಿ 75 ವರ್ಷ ವಯಸ್ಸಾದವರಿಗೂ ಟಿಕೆಟ್ ಕೊಡುವ ಸೂಚನೆ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು, ನಮ್ಮ ಕಾರ್ಯಕರ್ತರೇ ನನ್ನನ್ನು ಗೆಲ್ಲಿಸುತ್ತಾರೆ. ನಾನು ಗೆಲುವು ಸಾಧಿಸಲು ಕ್ಷೇತ್ರದಲ್ಲಿ ಓಡಾಡಬೇಕು ಅಂತೇನಿಲ್ಲ ಎಂದರು.
ಸಂಸದ ಜಿಎಂ ಸಿದ್ದೇಶ್ವರ್ ಅವರು ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಯೇ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಉತ್ತರ ಮತ ಕ್ಷೇತ್ರಕ್ಕೆ ಬರಲಿ, ಸ್ಪರ್ಧಿಸಲಿ. ನಾವೆಲ್ಲಾ ಮುಂದೆ ನಿಂತು ಅವರನ್ನು ಗೆಲ್ಲಿಸುತ್ತೇವೆ. ಎಂಪಿ ಜಿ ಎಂ ಸಿದ್ದೇಶ್ವರ್ ಅವರು ನನ್ನ ಕ್ಷೇತ್ರಕ್ಕೆ ಬರಲಿ, ನಾನು ಅವರ ಸ್ಥಾನಕ್ಕೆ ಹೋಗುವೆ ಎಂದು ಲೋಕಸಭಾ ಸದಸ್ಯನಾಗುವ ಇಂಗಿತವನ್ನು ಸಹ ಶಾಸಕ ಎಸ್ಎ ರವೀಂದ್ರನಾಥ್ ವ್ಯಕ್ತಪಡಿಸಿದರು.
ಇದನ್ನೂ ಓದಿ: ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲೇ ಸ್ಪರ್ಧೆ ಮಾಡುವೆ: ಸಚಿವ ಶ್ರೀರಾಮುಲು