ಗೋವಾದಲ್ಲಿ ಎಸ್ಸಿಒ ಸಭೆ: ಚೀನಾ, ಪಾಕಿಸ್ತಾನ ವಿದೇಶಾಂಗ ಸಚಿವರು ಭಾಗಿ - Sergey Lavrov reached Goa
🎬 Watch Now: Feature Video
ಪಣಜಿ (ಗೋವಾ): ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಡುವೆಯೂ ಗೋವಾದಲ್ಲಿ ಇಂದಿನಿಂದ ನಡೆಯುವ 2 ದಿನಗಳ ಶಾಂಗೈ ಸಹಕಾರ ಸಂಘಟನೆಯ ಸಭೆ(ಎಸ್ಸಿಒ) ಯಲ್ಲಿ ಚೀನಾ, ಪಾಕಿಸ್ತಾನ ವಿದೇಶಾಂಗ ಸಚಿವರು ಭಾಗವಹಿಸಲಿದ್ದಾರೆ. ಇದಲ್ಲದೇ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ಯೆಗೆ ಉಕ್ರೇನ್ ಯತ್ನ ಆರೋಪದ ಮಧ್ಯೆ ಆ ದೇಶದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಗೋವಾಕ್ಕೆ ಬಂದಿಳಿದಿದ್ದಾರೆ.
ಶಾಂಗೈ ಸಹಕಾರ ಸಂಘಟನೆಯ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ 2 ದಿನ ಕರಾವಳಿ ರಾಜ್ಯದಲ್ಲಿ ಇಂದಿನಿಂದ ನಡೆಯಲಿದೆ. ಗಡಿಯಲ್ಲಿ ಚೀನಾ ಮತ್ತು ಪಾಕಿಸ್ತಾನ ಉಪಟಳ ಹೆಚ್ಚಿದ್ದು, ಉದ್ವಿಗ್ನ ಪರಿಸ್ಥಿತಿ ಇದೆ. ಆದಾಗ್ಯೂ ಸಭೆಯಲ್ಲಿ ಆ ದೇಶಗಳ ವಿದೇಶಾಂಗ ಸಚಿವರು ಭಾಗವಹಿಸಲಿದ್ದಾರೆ. ಪಾಕ್ ಸಚಿವ ಬಿಲಾವಲ್ ಭುಟ್ಟೋ ಝರ್ದಾರಿ ಭಾರತದತ್ತ ಪ್ರಯಾಣ ಆರಂಭಿಸಿದ್ದಾರೆ.
ಎಸ್ಸಿಒ ಸದಸ್ಯರ ನಡುವೆ ಆರ್ಥಿಕ ಸಹಕಾರ ಮತ್ತು ಪ್ರಾದೇಶಿಕ ಭದ್ರತೆಯಂತಹ ಪ್ರಮುಖ ಭೌಗೋಳಿಕ, ರಾಜಕೀಯ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಇದೇ ವೇಳೆ ಶಾಂಘೈ ಸಹಕಾರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜಾಂಗ್ ಮಿಂಗ್ ಅವರನ್ನು ಭೇಟಿ (SCO) ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಅವರು ಭೇಟಿ ಮಾಡಿ ಮಾತುಕತೆ ನಡೆಸಿದರು.
ಓದಿ: 24 ಗಂಟೆ ಅವಧಿಯಲ್ಲಿ 2ನೇ ಎನ್ಕೌಂಟರ್: ಬಾರಾಮುಲ್ಲಾದಲ್ಲಿ ಇಬ್ಬರು ಉಗ್ರರ ಹತ್ಯೆ