ಬಾಗಲಕೋಟೆಯಲ್ಲಿ ಆರ್​ಎಸ್​ಎಸ್​ ಪಥಸಂಚಲನ.. ಗಮನ ಸೆಳೆದ ಗಣವೇಷಧಾರಿಗಳು - ವಿಡಿಯೋ - ​ ETV Bharat Karnataka

🎬 Watch Now: Feature Video

thumbnail

By ETV Bharat Karnataka Team

Published : Oct 30, 2023, 5:30 PM IST

ಬಾಗಲಕೋಟೆ : ನಗರದಲ್ಲಿಂದು ಆಕರ್ಷಕವಾಗಿ ಆರ್​ಎಸ್​ಎಸ್​ ಪಥಸಂಚಲನವನ್ನು ನಗರದ ಪ್ರಮುಖ ರಸ್ತೆಯಲ್ಲಿ ನಡೆಸಲಾಯಿತು. ಸುಮಾರು 2 ಸಾವಿರಕ್ಕೂ ಹೆಚ್ಚು ಗಣ ವೇಷಧಾರಿಗಳು ಪಥ ಸಂಚಲನದಲ್ಲಿ ಭಾಗಿಯಾಗುವ ಮೂಲಕ ಶಿಸ್ತಿನ ಸಿಪಾಯಿಗಳಂತೆ ಹೆಜ್ಜೆ ಹಾಕಿದರು. ಬಸವೇಶ್ವರ ವಿದ್ಯಾವರ್ಧಕ ಸಂಘದ ಆವರಣದಿಂದ ಪ್ರಾರಂಭವಾದ ಪಥಸಂಚಲನವನ್ನು ಎರಡು ತಂಡಗಳಾಗಿ ವಿಂಗಡಣೆ ಮಾಡಲಾಯಿತು. 

ಬಾಗಲಕೋಟೆ ನಗರದ ಪ್ರಮುಖ ರಸ್ತೆಯ ತುಂಬೆಲ್ಲಾ ಗಣ ವೇಷಧಾರಿಗಳು ಸಂಚಾರ ಮಾಡಿ, ಎರಡು ತಂಡಗಳು ಬಸವೇಶ್ವರ ವೃತ್ತದಲ್ಲಿ ಬಂದು ಸೇರಿದವು. ಇದನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನಸ್ತೋಮ ಸೇರಿದ್ದು, ಜಯ ಘೋಷಣೆ ಕೂಗಿ ಗಣ ವೇಷಧಾರಿಗಳ ಮೇಲೆ ಪುಷ್ಪವೃಷ್ಟಿಗರೆದರು. ದಾರಿ ಉದ್ದಕ್ಕೂ ಆಕರ್ಷಕ ರಂಗೋಲಿ ಬಿಡಿಸಿ, ಪಥಸಂಚಲನದ ಮೆರವಣಿಗೆಯನ್ನು ಸ್ವಾಗತಿಸಲಾಯಿತು. 

ಇನ್ನು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ತೊಟ್ಟ ಪುಣಾಣಿ ಮಕ್ಕಳು ನೋಡುಗರ ಗಮನ ಸೆಳೆದರು. ಈ ಬಾರಿ ವಿಶೇಷವಾಗಿ ರಾಮ ಮಂದಿರ ಹಾಗೂ ಶ್ರೀರಾಮ ಮೂರ್ತಿಯನ್ನು ಮೆರವಣಿಗೆ ಸಾಗುವ ಹಾದಿಯಲ್ಲಿ ಪ್ರದರ್ಶನ ಮಾಡುವ ಮೂಲಕ ಗಣ ವೇಷಧಾರಿಗಳನ್ನು ಹುರಿದುಂಬಿಸಲಾಯಿತು.

ಇದನ್ನೂ ಓದಿ : ಹಾವೇರಿಯ ರಟ್ಟೀಹಳ್ಳಿಯಲ್ಲಿ ಆರ್​ಎಸ್​ಎಸ್​ ಪಥಸಂಚಲನ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.