ಪೆಟ್ರೋಲ್ ಬಂಕ್ನಲ್ಲಿ ದರೋಡೆ; ಸೆಕ್ಯೂರಿಟಿ ಗಾರ್ಡ್ ಕೈ ಕಟ್ಟಿಹಾಕಿ ಹಲ್ಲೆ! - robbery
🎬 Watch Now: Feature Video
ಕೋಯಿಕ್ಕೋಡ್ (ಕೇರಳ): ಕೋಯಿಕ್ಕೋಡ್ ಜಿಲ್ಲೆಯ ಕೊಟ್ಟೂಲಿಯಲ್ಲಿರುವ ಪೆಟ್ರೋಲ್ ಬಂಕ್ನಲ್ಲಿ ಬುಧವಾರ ತಡರಾತ್ರಿ 1.40ರ ಸುಮಾರಿಗೆ ದರೋಡೆ ನಡೆದಿದೆ. ದರೋಡೆಕೋರ ಸೆಕ್ಯೂರಿಟಿ ಗಾರ್ಡ್ ಕೈಗಳನ್ನು ಟವೆಲ್‌ನಿಂದ ಕಟ್ಟಿ ಹಾಕಿ ಆತನ ಮೇಲೆ ಹಲ್ಲೆ ನಡೆಸಿ ಅಲ್ಲಿದ್ದ ನಗದನ್ನು ಎಗರಿಸಿ ಪರಾರಿಯಾಗಿದ್ದಾನೆ. ಪೆಟ್ರೋಲ್ ಬಂಕ್ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಸೆಕ್ಯೂರಿಟಿ ಗಾರ್ಡ್ ಮುಹಮ್ಮದ್ ರಫೀ ಗಾಯಗೊಂಡಿದ್ದು, ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಯಿಕ್ಕೋಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ದರೋಡೆಕೋರನ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಖದೀಮ 50,000 ರೂಪಾಯಿ ದೋಚಿರುವುದಾಗಿ ತಿಳಿದುಬಂದಿದೆ.
Last Updated : Feb 3, 2023, 8:23 PM IST