ಸಬರಮತಿ ನದಿಯಲ್ಲಿ ರಿವರ್ ಕ್ರೂಸ್ ಕಮ್ ಫ್ಲೋಟಿಂಗ್ ರೆಸ್ಟೋರೆಂಟ್: ಏಪ್ರಿಲ್​​ ವೇಳೆಗೆ ಆರಂಭ ಸಾಧ್ಯತೆ - ಅಹಮದಾಬಾದ್ ಲೇಟೆಸ್ಟ್​​ ನ್ಯೂಸ್​​

🎬 Watch Now: Feature Video

thumbnail

By

Published : Feb 18, 2023, 8:51 AM IST

ಅಹಮದಾಬಾದ್(ಗುಜರಾತ್​): ಅಹಮದಾಬಾದ್ ನಗರವು ವಿಶ್ವದ ಮೊದಲ ಪಾರಂಪರಿಕ ನಗರವಾಗಿದೆ. ಇಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಹಲವು ಸ್ಥಳಗಳಿವೆ. ಅಂತೆಯೇ ನಗರದ ಐತಿಹಾಸಿಕ ಸಬರಮತಿ ನದಿಯ ಮುಂಭಾಗದಲ್ಲಿ ನಿರ್ಮಿಸಲಾದ ವಾಕ್‌ವೇ ಸೇತುವೆ ಸಹ ಒಂದು. ಇಲ್ಲಿನ ಮತ್ತೊಂದು ಆಕರ್ಷಣೆ ಕ್ರೂಸ್ ಕಮ್ ಫ್ಲೋಟಿಂಗ್ ರೆಸ್ಟೋರೆಂಟ್. ಇದು ಏಪ್ರಿಲ್ ತಿಂಗಳ ಮಧ್ಯಭಾಗದಲ್ಲಿ ಆರಂಭಗೊಳ್ಳುವ ಸಾಧ್ಯತೆಯಿದೆ.

ಸಬರಮತಿ ನದಿಯ ಮುಂಭಾಗದಲ್ಲಿಯೇ ಕ್ರೂಸ್ ಕಮ್ ಫ್ಲೋಟಿಂಗ್(ತೇಲುವ) ರೆಸ್ಟೋರೆಂಟ್‌ ಸ್ಥಾಪಿಸಲಾಗುತ್ತಿದೆ. ಏಪ್ರಿಲ್ ತಿಂಗಳ ವೇಳೆಗೆ ನದಿಗೆ ಇಳಿಸುವ ಸಾಧ್ಯತೆ ಇದೆ. ಈ ಕ್ರೂಸ್ ತಯಾರಿಕೆಯ ಕಾರ್ಯವನ್ನು ಅಕ್ಷರ ಟ್ರಾವೆಲ್ಸ್‌ಗೆ ನೀಡಲಾಗಿದೆ. ಈ ವಿಹಾರಕ್ಕೆ 2011 ರಿಂದ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಅಂತಿಮವಾಗಿ ಅಕ್ಷರ ಟ್ರಾವೆಲ್ಸ್‌ಗೆ ಈ ಕ್ರೂಸ್‌ನ ನಿರ್ವಹಣೆಯನ್ನು ವಹಿಸಲಾಗಿದೆ. ಅಂಬೇಡ್ಕರ್ ಸೇತುವೆಯಿಂದ ಸಬರಮತಿಯ ನೆಹರು ಸೇತುವೆಯವರೆಗೆ ವಿಹರಿಸಲಿದೆ. ಈ ರೆಸ್ಟೋರೆಂಟ್‌ಗಳ ಗಾತ್ರ 100*30 ಅಡಿ. ಕ್ರೂಸ್ 150 ಜನರು ಒಟ್ಟಿಗೆ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದ್ದು, ಎರಡು ಮಹಡಿಗಳನ್ನು ಹೊಂದಿರುತ್ತದೆ. ಇದರಲ್ಲಿ ಕೆಳ ಮಹಡಿಯು ಹವಾನಿಯಂತ್ರಣವನ್ನು ಹೊಂದಿರುತ್ತದೆ ಮತ್ತು ಮೇಲಿನ ಮಹಡಿಯು ತೆರೆದಿರುತ್ತದೆ.

ನೆಹರು ಸೇತುವೆಯಿಂದ ಅಂಬೇಡ್ಕರ್ ಸೇತುವೆಯವರೆಗಿನ ದೂರವನ್ನು ಕ್ರಮಿಸಲು ಇದು ಸರಿಸುಮಾರು 40 ರಿಂದ 45 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಹಾಗಾಗಿ ಸಂಪೂರ್ಣ ಸುತ್ತು ಹಾಕಲು ಒಂದೂವರೆ ಗಂಟೆ ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ. ಈ ಕ್ರೂಸ್‌ನಲ್ಲಿ ಸೌಂಡ್ ಸಿಸ್ಟಮ್‌ನೊಂದಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಬೋಟಿಂಗ್ ಮತ್ತು ಸೈಕ್ಲಿಂಗ್ ಪ್ರಸ್ತುತ ಅಹಮದಾಬಾದ್ ಸಬರಮತಿ ನದಿಯ ಮುಂಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆದ್ದರಿಂದ ಸದ್ಯದಲ್ಲಿಯೇ ಸಬರಮತಿ ನದಿಯಲ್ಲಿ ರಿವರ್ ಕ್ರೂಸ್ ಮತ್ತು ಫ್ಲೋಟಿಂಗ್ ರೆಸ್ಟೋರೆಂಟ್‌ಗಳು ಕಾಣಿಸಿಕೊಳ್ಳಲಿವೆ.

ಇದನ್ನೂ ಓದಿ: ತಮಿಳುನಾಡು: 'ಟ್ರಾನ್ಸ್ ಕಿಚನ್' ರೆಸ್ಟೋರೆಂಟ್ ತೆರೆದ ಮಂಗಳಮುಖಿಯರು

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.