ಬೆಂಗಾಲ್ ಸಫಾರಿ ಪಾರ್ಕ್‌ನಲ್ಲಿ 3 ಮುದ್ದಾದ ಮರಿಗಳಿಗೆ ಜನ್ಮ ನೀಡಿದ ರಿಕಾ ಹುಲಿ- ವಿಡಿಯೋ
🎬 Watch Now: Feature Video
Published : Aug 27, 2023, 9:12 AM IST
|Updated : Aug 27, 2023, 9:19 AM IST
ಪಶ್ಚಿಮ ಬಂಗಾಳ: ಜಲ್ಪೈಗುರಿ ಜಿಲ್ಲೆಯ ಸಿಲಿಗುರಿ ಸಮೀಪದಲ್ಲಿರುವ ಬೆಂಗಾಲ್ ಸಫಾರಿ ಪಾರ್ಕ್‌ನಲ್ಲಿ ಆಗಸ್ಟ್ 19 ರ ಬೆಳಗ್ಗೆ 5 ವರ್ಷದ ರಿಕಾ ಎಂಬ ಹುಲಿ ಮೂರು ಮರಿಗಳಿಗೆ ಜನ್ಮ ನೀಡಿದೆ. ಈ ಮೂಲಕ ಉದ್ಯಾನದಲ್ಲಿ ಹುಲಿಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ತಾಯಿ ಹುಲಿ ಮತ್ತು ಮರಿಗಳು ಆರೋಗ್ಯವಾಗಿವೆ. ಸಿಸಿಟಿವಿ ಕ್ಯಾಮರಾಗಳ ಮೂಲಕ ನಿಗಾ ಇಡಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
"ತಾಯಿ ಹುಲಿ ಮತ್ತು ಎಲ್ಲಾ ಮರಿಗಳು ಆರೋಗ್ಯವಾಗಿವೆ. ಸಿಸಿ ಕ್ಯಾಮರಾಗಳ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಅರಣ್ಯಾಧಿಕಾರಿಗಳು ಶೀಘ್ರದಲ್ಲೇ ಉದ್ಯಾನವನದಲ್ಲಿ ‘ಸಿಂಹ ಸಫಾರಿ’ ಆರಂಭಿಸಲು ಮುಂದಾಗಿದ್ದಾರೆ" ಎಂದು ಅರಣ್ಯ ಸಚಿವ ಜ್ಯೋತಿ ಪ್ರಿಯಾ ಮಲ್ಲಿಕ್ ಮಾಹಿತಿ ನೀಡಿದರು.
2018 ರಲ್ಲಿ ಬೆಂಗಾಲ್ ಸಫಾರಿ ಪಾರ್ಕ್‌ನಲ್ಲಿ ರಿಕಾ ಸೇರಿದಂತೆ ಮೂರು ಹುಲಿಗಳು ಜನಿಸಿದ್ದವು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಹುಲಿಗಳಿಗೆ ಹೆಸರಿಟ್ಟಿದ್ದರು. ಉದ್ಯಾನವನವು 100 ಎಕರೆ ವಿಸ್ತೀರ್ಣ ಹೊಂದಿದೆ. ಪ್ರಸ್ತುತ, ಹುಲಿಗಳು, ಜಿಂಕೆಗಳು, ಘೇಂಡಾಮೃಗಗಳು, ಆನೆ, ಕರಡಿ, ವಿವಿಧ ಪಕ್ಷಿಗಳು ಮತ್ತು ಆಕರ್ಷಕ ಜಲಪಾತಗಳನ್ನು ಇಲ್ಲಿ ನೋಡಬಹುದು.
ಇದನ್ನೂ ಓದಿ : Watch.. ಹುಲಿ ಬಂತು ಹುಲಿ... ಒಡಿಶಾ - ಆಂಧ್ರ ಗಡಿಯಲ್ಲಿ ರಾಯಲ್ ಬೆಂಗಾಲ್ ಟೈಗರ್ ಘರ್ಜನೆ