ರಾಮನಗರ ಶ್ರೀ ಚಾಮುಂಡೇಶ್ವರಿ ಕರಗೋತ್ಸವ ವೈಭವ- ವಿಡಿಯೋ - etv bharat kannada

🎬 Watch Now: Feature Video

thumbnail

By

Published : Jul 5, 2023, 11:47 AM IST

Updated : Jul 5, 2023, 2:37 PM IST

ರಾಮನಗರ: ಜಿಲ್ಲೆಯ ಐತಿಹಾಸಿಕ ಚಾಮುಂಡೇಶ್ವರಿ ಅಮ್ಮನವರ ಅಗ್ನಿಕೊಂಡೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗೆ 7.30ಕ್ಕೆ ಅದ್ದೂರಿಯಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಚಾಮುಂಡೇಶ್ವರಿ ಕರಗ ಮಹೋತ್ಸವ ಜರುಗಿತು. ಚಾಮುಂಡೇಶ್ವರಿ ಕರಗ ಹೊತ್ತು ಅಗ್ನಿಕಂಡದಲ್ಲಿ ಕೊಂಡೋತ್ಸವ ನಡೆಸಿದ ದೃಶ್ಯವನ್ನ ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಕೊಂಡ ಹಾಯುವ ವೇಳೆ ಕರಗದ ಮೇಲೆ ಹೂಮಳೆಗೈದು ಭಕ್ತಿ ಸಂಪರ್ಪಿಸಿದ ಭಕ್ತರು, ಬಳಿಕ ಅಗ್ನಿಕೊಂಡಕ್ಕೆ ಉಪ್ಪುಹಾಕಿ ತಮ್ಮ ಹರಕೆ ತೀರಿಸಿದರು.

ಕರಗ ಉತ್ಸವದ ಅಂಗವಾಗಿ ಮಂಗಳವಾರ ಬೆಳಗಿನ ಜಾವದಿಂದಲೇ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಸ್ಥಳೀಯರು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಉತ್ಸವದಲ್ಲಿ ಭಾಗಿಯಾಗಿ ದೇವಿಯ ಕೃಪೆಗೆ ಪಾತ್ರರಾದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​, ಸಂಸದ ಡಿ.ಕೆ. ಸುರೇಶ್​, ಉಸ್ತುವಾರಿ ಸಚಿವ ರಾಮಲಿಂಗ ರೆಡ್ಡಿ, ಶಾಸಕ ಇಕ್ಬಾಲ್​ ಹುಸೇನ್​ ದೇವಿಯ ದರ್ಶನ ಪಡೆದರು.  

ಶಾಸಕ ಇಕ್ಬಾಲ್​ ಹುಸೇನ್​ 9 ಶಕ್ತಿದೇವತೆಗಳಿಗೆ ಮಡಿಲಕ್ಕಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ನನ್ನ ಕ್ಷೇತ್ರದ ಶಕ್ತಿದೇವತೆ ಚಾಮುಂಡೇಶ್ವರಿ ಅಮ್ಮನ ಆಶೀರ್ವಾದದಿಂದ ಶಾಸಕನಾಗಿದ್ದೇನೆ. ನಾನು ಶಾಸಕನಾದ ನಂತರ ನಾಡಹಬ್ಬ ಆಚರಣೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಪಟ್ಟಣದಲ್ಲಿ ನಡೆಯುತ್ತಿರುವ ಕರಗದ ದೇವಾಲಯಗಳಾದ ಚಾಮಂಡೇಶ್ವರಿ ಬಡಾವಣೆಯ ಪ್ರಮುಖ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ, ಐಜೂರು ಆದಿಶಕ್ತಿ ದೇವತೆ, ಬಿಸಿಲು ಮಾರಮ್ಮ, ಮಗ್ಗದಕೇರಿ ಮಾರಮ್ಮ, ಭಂಡಾರಮ್ಮದೇವಿ, ಮುತ್ತಮಾರಮ್ಮ, ಶೆಟ್ಟಿಹಳ್ಳಿ ಆದಿಶಕ್ತಿ, ಕೊಂಕಾಣಿದೊಡ್ಡಿ ಆದಿಶಕ್ತಿ ಕರಗ ನಡೆಯುವ ದೇವಾಲಯಗಳಲ್ಲಿ ದೇವಿಗೆ ಮಡಿಲಕ್ಕಿ ನೀಡಿ ಹಬ್ಬಾಚರಣೆ ಮಾಡಿದ್ದೇನೆ ಎಂದರು. 

ಇದನ್ನೂ ಓದಿ: ಒಂದು ಭುಜದಲ್ಲಿ ಗಂಗಾಜಲ, ಮತ್ತೊಂದು ಭುಜದಲ್ಲಿ ವೃದ್ಧ ತಾಯಿ: ಭೋಲೆನಾಥನ ದರ್ಶನಕ್ಕೆ ಹೊರಟ ಮಗ!- ವಿಡಿಯೋ

Last Updated : Jul 5, 2023, 2:37 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.