ದಿನವಿಡೀ ಸಾಂಸ್ಕೃತಿಕ ನಗರಿಯಲ್ಲಿ ಬಿಟ್ಟು- ಬಿಟ್ಟು ಸುರಿಯುತ್ತಿರುವ ಮಳೆ : ವಿಡಿಯೋ - ‘ಈಟಿವಿ ಭಾರತ್​ ಕನ್ನಡ ನ್ಯೂಸ್

🎬 Watch Now: Feature Video

thumbnail

By ETV Bharat Karnataka Team

Published : Sep 6, 2023, 7:28 PM IST

ಮೈಸೂರು : ಮಂಗಳವಾರ ಮಧ್ಯಾಹ್ನ ಗಜಪಡೆ ಅರಮನೆ ಪ್ರವೇಶ ಮಾಡುತ್ತಿದ್ದಂತೆ ನಿನ್ನೆ ಸಂಜೆಯೇ ಮೈಸೂರು ನಗರದಲ್ಲಿ ಮಳೆಯಾಗಿದ್ದು, ಬುಧವಾರ ಸಹ ಮಧ್ಯಾಹ್ನದಿಂದಲೇ ಮಳೆ ಬಿಟ್ಟು-ಬಿಟ್ಟು ಸುರಿಯುತ್ತಿದೆ.

ಈ ರೀತಿಯ ಮಳೆಯಿಂದಾಗಿ ಜನರಿಗೆ ಹಾಗೂ ವಾಹನ ಸವಾರರಿಗೆ ತೊಂದರೆ ಆಗಿದ್ದು, ಪರದಾಡುವ ಪರಿಸ್ಥಿತಿ ಬಂದಿದೆ. ಆದರೂ ಬಿಸಿಲಿನ ತಾಪದಿಂದ ಬೆಂದಿದ್ದ ಜನರಿಗೆ ಮಳೆ ತಂಪೆರೆದಿದೆ. ಜೊತೆಗೆ ಮೈಸೂರು ಜಿಲ್ಲೆಯಲ್ಲಿ ರೈತರು ಬೆಳೆದ ಬೆಳೆಗಳಿಗೆ ಸ್ವಲ್ಪ ಅನುಕೂಲವಾಗಿದೆ. ಈಗಾಗಲೇ ಜಿಲ್ಲೆಯ ಹಲವು ಕಡೆ ಭತ್ತ ನಾಟಿ ಮಾಡಿದ್ದು, ನೀರಿಲ್ಲದೇ ರೈತರು ಆತಂಕಕ್ಕೆ ಒಳಗಾಗಿದ್ದರು. ಮಳೆಯಾಗಿರುವುದರಿಂದ ಸ್ವಲ್ಪ ಸಮಾಧಾನಕಾರ ವಾತಾವರಣ ಉಂಟಾಗಿದೆ.   

ಕಳೆದ ಎರಡು ದಿನಗಳಿಂದ ಹವಾಮಾನ ಇಲಾಖೆ ರಾಜ್ಯದಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿದ್ದು, ಸೆಪ್ಟೆಂಬರ್ 7 ಮತ್ತು 8 ರಂದು ಭಾರಿ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಕೆಲ ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದಲ್ಲಿ ಸೆಪ್ಟೆಂಬರ್ 7 ರಿಂದ 9ರ ವರೆಗೆ ಭಾರಿ ಮಳೆ ಆಗುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಹಾಗೂ ಸೆ.7 ಮತ್ತು 8 ರಂದು ಕಲಬುರಗಿ, ವಿಜಯಪುರ, ಕೊಡಗು ಮತ್ತು ಕೇವಲ ಸೆ.7 ರಂದು ಯಾದಗಿರಿ ಮತ್ತು ಅದರ ಮುಂದಿನ ದಿನ ರಾಯಚೂರು, ಚಾಮರಾಜನಗರ ಮೈಸೂರು ಜಿಲ್ಲೆಗಳಿಗೆ ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.    

ಇದನ್ನೂ ಓದಿ : Mysuru Dussehra: ದಸರಾ ಗಜಪಡೆ ತೂಕ ಪರೀಕ್ಷೆ.. ಕ್ಯಾಪ್ಟನ್ ಅಭಿಮನ್ಯುನೇ ಹೆಚ್ಚು ಬಲಶಾಲಿ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.