ಹೃದಯಾಘಾತ: ವಿದ್ಯಾರ್ಥಿಗಳಿಂದ ಮೂಕಾಭಿನಯದ ನೃತ್ಯರೂಪಕ- ವಿಡಿಯೋ

🎬 Watch Now: Feature Video

thumbnail

ಗಂಗಾವತಿ: ಹೃದಯಾಘಾತ ಎನ್ನುವುದು ಇಂದು ಭಾರತೀಯರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ವಯೋಮಿತಿಯ ಯಾವುದೇ ಭೇದವಿಲ್ಲದೇ ಕಿರಿ ಜೀವಗಳನ್ನೂ ಆಪೋಶನ ಪಡೆಯುತ್ತಿರುವ ಈ ಖಾಯಿಲೆಗೆ ಏನು ಕಾರಣ?. ನಿಯಂತ್ರಣ ಹೇಗೆ ಎಂಬುದನ್ನು ನಗರದಲ್ಲಿ ವಿದ್ಯಾರ್ಥಿಗಳು ಮೂಕಾಭಿನಯದ ನೃತ್ಯ ರೂಪಕದಲ್ಲಿ ಪ್ರದರ್ಶಿಸಿದರು.

ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸ್ವಾತಂತ್ರೋತ್ಸವ ಧ್ವಜಾರೋಹಣದ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಗರದ ಸ್ಪೂರ್ತಿ ನರ್ಸಿಂಗ್​ ಮತ್ತು ಪ್ಯಾರಾಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯರೂಪಕ ಗಮನ ಸೆಳೆಯಿತು.

"ಹೃದಯಾಘಾತ, ಕಾರ್ಡಿಯಾಕ್ ಅರೆಸ್ಟ್, ಹೃದಯ ಸ್ತಂಭನ ಎಂಬ ಕಾಯಿಲೆ ಭಾರತವನ್ನು ಪಿಡುಗಾಗಿ ಕಾಡುತ್ತಿದೆ. ವಿಧಿಯಾಟವನ್ನು ಯಾರೂ ಬಲ್ಲವರಿಲ್ಲ. ನಾವು ಅಂದುಕೊಂಡಂತೆ ಯಾವುದೂ ಆಗೋದಿಲ್ಲ" ಎಂಬ ಹಿನ್ನೆಲೆ ಧ್ವನಿಯೊಂದಿಗೆ ನೃತ್ಯರೂಪಕ ಆರಂಭವಾಗುತ್ತದೆ. ನಟ ಪುನೀತ್ ರಾಜ್​ಕುಮಾರ್​, ಚಿರಂಜೀವಿ ಸರ್ಜ, ಸ್ಪಂದನಾ, ವಿದ್ಯಾರ್ಥಿನಿ ಫೆಲೀಸಾ, ಬಸವರಾಜ ಮಾಲಿಪಾಟೀಲ್ ಇತರರು ಹೃದಯಾಘಾತದಿಂದ ಸಾವನ್ನಪ್ಪಿದವರು. ಈ ಹೃದಯ ಸ್ತಂಭನಕ್ಕೆ ಏನು ಕಾರಣವಾಗುವ ಅಂಶಗಲೇನು ಎಂಬ ವಿಷಯವನ್ನು ನೃತ್ಯರೂಪಕದಲ್ಲಿ ವಿದ್ಯಾರ್ಥಿಗಳು ಸಾದರಪಡಿಸಲು ಪ್ರಯತ್ನಿಸಿದರು.

ಇದನ್ನೂ ಓದಿ: ಶಟಲ್ ಆಡುವಾಗ ಹೃದಯಾಘಾತದಿಂದ ವ್ಯಕ್ತಿ ಸಾವು.. ಸಿಸಿಟಿವಿಯಲ್ಲಿ ದೃಶ್ಯ ಸೆರೆ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.