ದೇಶದ ಇತಿಹಾಸದಲ್ಲೇ ಕಾಯಕಯೋಗಿಗಳಿಂದ ಪ್ರಧಾನಿಗೆ ಸ್ವಾಗತ: ಶಾಸಕ ಅಭಯ್ ಪಾಟೀಲ್

By

Published : Feb 26, 2023, 9:27 PM IST

thumbnail

ಬೆಳಗಾವಿ: ದೇಶದ ಇತಿಹಾಸದಲ್ಲೇ ಕಾಯಕಯೋಗಿಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ ಕೋರುತ್ತಿರುವುದು ತುಂಬಾ ಸಂತೋಷ ಮೂಡಿಸಿದೆ ಇದು ಕರ್ನಾಟಕದಿಂದ ವಿನೂತನವಾದ ಕಾರ್ಯ ಎಂದು ಶಾಸಕ ಅಭಯ್ ಪಾಟೀಲ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗಾವಿಗೆ ಆಗಮನ ಹಿನ್ನೆಲೆ ಮಾಧ್ಯಮದವರೊಂದಿಗೆ ಮಾತನಾಡಿ ಶಾಸಕ, ದೇಶಕ್ಕೆ ಸ್ವಾತಂತ್ರ ದೊರೆತು 75 ವರ್ಷ ಕಳೆದು ಹಲವು ಪ್ರಧಾನಮಂತ್ರಿಗಳು ಆಗಿಹೋಗಿದ್ದಾರೆ. ಅವರ ಸ್ವಾಗತವನ್ನು ಶಾಸಕರು, ಮಂತ್ರಿಗಳು, ಮುಖ್ಯಮಂತ್ರಿ, ಜನಪ್ರತಿನಿಧಿಗಳು ಮಾಡುತ್ತಿದ್ದರು. ಆದರೆ ಬೆಳಗಾವಿಯಲ್ಲಿ ಕಾರ್ಮಿಕರು, ಪೌರಕಾರ್ಮಿಕರು, ಆಟೋ ಡ್ರೈವರ್, ಕೃಷಿಕ, ಹೀಗೆ ಕಾಯಕಯೋಗಿಗಳಿಂದ ಪ್ರಧಾನಿಯವರಿಗೆ ಬೆಳಗಾವಿಯಿಂದ ಸ್ವಾಗತ ಕೋರಲಾಗುವುದು. ಅತಿ ಸಾಮಾನ್ಯ ವ್ಯಕ್ತಿಗೂ ಪ್ರಧಾನಿಯವರ ಸಂಪರ್ಕ ಸಿಗಲಿ ಎಂಬ ಉದ್ದೇಶದಿಂದ ವಿನೂತನ ಕಾರ್ಯಕ್ರಮವನ್ನು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಅವರು ಮಾಡಿದ್ದಾರೆ. ಅವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಶಾಸಕರು ಹೇಳಿದರು.

ಬೆಳಗಾವಿಯಲ್ಲಿ ಪ್ರಧಾನಿ ಬೃಹತ್ ರೋಡ್ ಶೋ: ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಯಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ರೋಡ್ ಶೋ ನಲ್ಲಿ ಪ್ರಧಾನಿಯವರ ಯೋಜನೆಗಳು, ಹಾಗೂ ಗಣ್ಯ ವ್ಯಕ್ತಿಗಳ ಲೈವ್ ಶೋ ಕಾರ್ಯಕ್ರಮ ನಡೆಯುತ್ತಿರುತ್ತದೆ. 

ಸುಮಾರು ಹತ್ತು ಸಾವಿರ ಹೆಣ್ಣು ಮಕ್ಕಳಿಂದ ಕೇಸರಿ ಪೇಟ ತೊಟ್ಟು ಪೂರ್ಣ ಕುಂಭಮೇಳ ಕಾರ್ಯಕ್ರಮ ನಡೆಸುತ್ತಾರೆ ಮತ್ತು ಕಾಂಗ್ರೆಸ್ ಕಾಲಘಟ್ಟದ ಹಾಗೂ ಬಿಜೆಪಿ ಸರ್ಕಾರದ ನಡುವಿನ ವ್ಯತ್ಯಾಸ ಬಿಂಬಿಸುವ ಚಿತ್ರಣಗಳು ಕೂಡ ರೋಡ್ ಶೋ ವೇಳೆ ಪ್ರದರ್ಶನ ಮಾಡಲಾಗುವುದೆಂದು ಶಾಸಕ ಅಭಯ್ ಪಾಟೀಲ್ ತಿಳಿಸಿದರು.

ಇದನ್ನೂ ಓದಿ:  ಕಾಂಗ್ರೆಸ್​ನಲ್ಲಿ ರಾಷ್ಟ್ರೀಯ ನಾಯಕರಿಲ್ಲ, ನಮ್ಮ ಪಕ್ಷದಲ್ಲಿ ಇದ್ದಾರೆ: ಪ್ರಹ್ಲಾದ್ ಜೋಶಿ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.