ಸುಡಾನ್ನಿಂದ ವಾಪಸಾದ ಹಕ್ಕಿಪಿಕ್ಕಿ ಜನರೊಂದಿಗೆ ಮೋದಿ ಮಾತುಕತೆ-ವಿಡಿಯೋ - ಬೆಂಗಳೂರು ರೋಡ್ ಶೋ
🎬 Watch Now: Feature Video
ಶಿವಮೊಗ್ಗ: ಆಫ್ರಿಕಾದ ಸುಡಾನ್ ದೇಶದಲ್ಲಿ ಆಂತರಿಕ ಯುದ್ಧದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ಬುಡಕಟ್ಟು ಜನಾಂಗ ಹಕ್ಕಿಪಿಕ್ಕಿ ಸಮುದಾಯದ ಜನರು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಆಗಿದ್ದಾರೆ. ನಿನ್ನೆ (ಭಾನುವಾರ) ಶಿವಮೊಗ್ಗಕ್ಕೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಹಕ್ಕಿಪಿಕ್ಕಿ ಜನರೊಂದಿಗೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾತುಕತೆ ನಡೆಸಿದರು.
ತಮ್ಮನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತಂದ ಪ್ರಧಾನಿ ಮೋದಿಗೆ ಹಕ್ಕಿಪಿಕ್ಕಿ ಜನರು ಅಭಿನಂದನೆ ಸಲ್ಲಿಸಿದರು. ತಾವೇ ತಯಾರಿಸಿದ ವಿಶೇಷ ಮಣಿ ಹಾರವನ್ನು ಕೊರಳಿಗೆ ಹಾಕಿ ಗೌರವಿಸಿದರು. ನಂತರ, ತಾವು ಸುಡಾನ್ಗೆ ವ್ಯಾಪಾರಕ್ಕೆ ಹೋಗಿದ್ದೆವು. ಅಲ್ಲಿ ಏಕಾಏಕಿ ಉಂಟಾದ ಆಂತರಿಕ ಕಲಹ ಮತ್ತು ಎದುರಿಸಿದ ಸಂಕಷ್ಟದ ಕಹಿ ಅನುಭವನ್ನು ಪ್ರಧಾನಿಗೆ ವಿವರಿಸಿದರು.
ನಿಮ್ಮೆಲ್ಲರನ್ನು ಸುರಕ್ಷಿತವಾಗಿ ದೇಶಕ್ಕೆ ವಾಪಸ್ ಕರೆ ತರುವುದು ಪ್ರಧಾನ ಮಂತ್ರಿಯಾಗಿ ನನ್ನ ಕರ್ತವ್ಯ. ನೀವೆಲ್ಲ ಭಾರತೀಯ ಪ್ರಜೆಗಳು. ನಿಮ್ಮ ಜೀವನದ ಜವಾಬ್ದಾರಿ ನಮ್ಮ ಹೊಣೆ ಎಂದು ತಿಳಿಸಿದರು. ಅಲ್ಲದೇ ಹಕ್ಕಿಪಿಕ್ಕಿಗಳ ವೇಷಭೂಷಣ ಸೇರಿದಂತೆ ಅವರ ಜೀವನ ಶೈಲಿಯನ್ನು ಮೋದಿ ಕೊಂಡಾಡಿದರು.
ಇದನ್ನೂ ಓದಿ: ಹೆಚ್ಎಎಲ್ ವಿಮಾನ ನಿಲ್ದಾಣದ ಬಳಿ ಅಣ್ಣಾಮಲೈರನ್ನ ತಡೆದ ಪೊಲೀಸರು..