ಸ್ವಾತಂತ್ರ್ಯ ಸಂಭ್ರಮಕ್ಕೆ ಆಹ್ವಾನಿತ 1800 ವಿಶೇಷ ಗಣ್ಯರ ಜೊತೆ ಬೆರೆತ ಪ್ರಧಾನಿ ಮೋದಿ: ವಿಡಿಯೋ
🎬 Watch Now: Feature Video
ನವದೆಹಲಿ: 'ಜನ ಭಾಗೀದಾರಿಕೆ' ತತ್ವದಡಿ ಈ ಬಾರಿಯ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾಗಿದ್ದ ದೇಶದ ಮೂಲೆ ಮೂಲೆಗಳಿಂದ ಬಂದಿದ್ದ 1800 ವಿಶೇಷ ಗಣ್ಯರ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಬೆರೆತರು. ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಬಳಿಕ ವಿಶೇಷ ಅತಿಥಿಗಳನ್ನು ಭೇಟಿ ಮಾಡಿದ ಮೋದಿ ಕೆಲವರಿಂದ ಉಡುಗೊರೆಗಳನ್ನೂ ಪಡೆದುಕೊಂಡರು. ಪ್ರಧಾನಿ ಮೋದಿ ಅವರನ್ನು ತೀರಾ ಹತ್ತಿರದಿಂದ ನೋಡಿ, ಕೈಕುಲುಕಿ ಮಾತನಾಡಿಸಿದ ಸಾಮಾನ್ಯ ಅತಿಥಿಗಳು ಸಂತಸ ವ್ಯಕ್ತಪಡಿಸಿದರು.
ಯಾರು ಆ ವಿಶೇಷ ಅತಿಥಿಗಳು: ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕುವ ಗ್ರಾಮ ಪಂಚಾಯಿತಿಗಳ 400 ಸರಪಂಚರು, ರೈತ ಉತ್ಪಾದಕ ಸಂಸ್ಥೆಗಳ 250 ರೈತರು, ಪಿಎಂ ಕಿಸಾನ್ ಯೋಜನೆಯ 50 ಫಲಾನುಭವಿಗಳು, ಪಿಎಂ ಕೌಶಲ ವಿಕಾಸ್ ಯೋಜನೆ 50 ಮಂದಿ, 50 ಖಾದಿ ಕಾರ್ಮಿಕರು, 50 ಶಿಕ್ಷಕರು, 50 ದಾದಿಯರು, 50 ಬೆಸ್ತರು, ಹೊಸ ಸಂಸತ್ ಕಟ್ಟಡ ನಿರ್ಮಾನ ಮಾಡಿದ 50 ಕೆಲಸಗಾರರು, ವಿವಿಧ ಯೋಜನೆಗಳ 50 ಫಲಾನುಭವಿಗಳು ಸೇರಿ ಒಟ್ಟು 1800 ವಿಶೇಷ ಅತಿಥಿಗಳನ್ನು 77ನೇ ಸ್ವಾತಂತ್ರ್ಯೋತ್ಸವಕ್ಕೆ ದೇಶದ ಎಲ್ಲ ರಾಜ್ಯಗಳಿಂದ ಆಹ್ವಾನ ನೀಡಲಾಗಿತ್ತು.
ಕರ್ನಾಟಕದ 7 ಮಂದಿಗೆ ಈ ವಿಶೇಷ ಆಹ್ವಾನ ಸಿಕ್ಕಿದೆ. ಅದರಲ್ಲಿ ಕಲಬುರಗಿಯ ಇಬ್ಬರು, ಮಂಡ್ಯ, ಚಾಮರಾಜನಗರ, ವಿಜಯನಗರ, ಉಡುಪಿ, ಹಾವೇರಿ ಜಿಲ್ಲೆಗಳಿಂದ ಪ್ರತಿನಿಧಿಸಿದ್ದರು.
ಇದನ್ನೂ ಓದಿ: ಸ್ವಾತಂತ್ರ್ಯ ಭಾಷಣದಲ್ಲಿ ಮಣಿಪುರ ವಿಚಾರ ಪ್ರಸ್ತಾಪ.. ದೇಶವನ್ನು ವಿಶ್ವದ 3ನೇ ಆರ್ಥಿಕತೆಯಾಗಿಸುವ ವಾಗ್ದಾನ ಮಾಡಿದ ಮೋದಿ