ಕೊಲ್ಲೂರಿನಲ್ಲಿ ಸಲಾಂ ಮಂಗಳಾರತಿ ರದ್ದು.. ಸರ್ಕಾರದ ಆದೇಶ ಸ್ವಾಗತಿಸಿದ ಅರ್ಚಕರು - etv bharath kannada news
🎬 Watch Now: Feature Video
ಉಡುಪಿ: ಕೊಲ್ಲೂರು ದೇವಾಲಯ ಸೇರಿದಂತೆ ಎಲ್ಲಾ ದೇವಾಲಯಗಳಲ್ಲಿ ಸಲಾಂ ಹೆಸರಿನ ಮಂಗಳಾರತಿ ರದ್ದು ಆದೇಶವನ್ನು ಕೊಲ್ಲೂರು ದೇವಳ ಅರ್ಚಕರು ಸ್ವಾಗತಿಸಿದ್ದಾರೆ. ದೇವಳದ ಅರ್ಚಕ ಸುಬ್ರಮಣ್ಯ ಅಡಿಗ ಈ ಕುರಿತು ಹೇಳಿಕೆ ನೀಡಿ ಧಾರ್ಮಿಕ ಪರಿಷತ್ತು ತೆಗೆದುಕೊಂಡ ನಿರ್ಧಾರ ಅತ್ಯಂತ ಸ್ವಾಗತಾರ್ಹ. ಕೊಲ್ಲೂರು ದೇವಸ್ಥಾನದಲ್ಲಿ ತ್ವರಿತ ಮಂಗಳಾರತಿ ಮಾಡುತ್ತಿದ್ದೆವು. ಜನರು ಆಡುಭಾಷೆಯಲ್ಲಿ ಇದನ್ನು ಸಲಾಂ ಎಂಬ ಹೆಸರಲ್ಲಿ ಕರೆಯುತ್ತಿದ್ದರು. ಜನರು ವಾಡಿಕೆಯಂತೆ ಕರೆಯುತ್ತಿದ್ದರೆ ವಿನಃ ಯಾವುದೇ ಆಚರಣೆ ಇರಲಿಲ್ಲ. ಇನ್ಮುಂದೆ ಸಂಧ್ಯಾರತಿ ಅಥವಾ ದೀವಟಿಕೆ ಮಂಗಳಾರತಿ ಇತ್ಯಾದಿ ಹೆಸರಿನಿಂದಲೇ ಸಂಭೋದಿಸಲು ಹೇಳಿದ್ದಾರೆ. ಜನರು ಕೂಡ ಈ ಬದಲಾವಣೆ ಗಮನಿಸಬೇಕು ಎಂದು ಮನವಿ ಮಾಡುತ್ತೇನೆ. ಎಲ್ಲರೂ ಧಾರ್ಮಿಕ ಪರಿಷತ್ತಿನ ನಿರ್ಧಾರದಂತೆ ನಡೆದುಕೊಳ್ಳೋಣ ಎಂದು ಹೇಳಿದ್ದಾರೆ.
Last Updated : Feb 3, 2023, 8:35 PM IST