ಹು-ಧಾ ಪಾಲಿಕೆ ಸಭೆಗೆ ಆಗಮಿಸಿದ ಗರ್ಭಿಣಿ: ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲು
🎬 Watch Now: Feature Video
Published : Aug 31, 2023, 3:57 PM IST
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗೆ ಇಂದು ತುಂಬು ಗರ್ಭಿಣಿಯಾಗಿದ್ದ ಪಾಲಿಕೆ ಸದಸ್ಯೆ ಆಗಮಿಸಿದ್ದರು. ಸಭೆಗೆ ಆಗಮಿಸುತ್ತಿದಂತೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ನವೀಕರಣಗೊಂಡ ಪಾಲಿಕೆಯ ಸಭಾಭವನದಲ್ಲಿ ಸಾಮಾನ್ಯ ಸಭೆ ನಡೆಯುತ್ತಿತ್ತು. ಈ ಸಭೆಗೆ ವಾರ್ಡ್ ಸಂಖ್ಯೆ 54ರ ಸದಸ್ಯೆ ಹಾಗು ತುಂಬು ಗರ್ಭಿಣಿ ಸರಸ್ವತಿ ಧೋಂಗಡಿ ಅವರು ಆಗಮಿಸಿದ್ದರು.
ಇದನ್ನೂ ಓದಿ: ಆರೋಗ್ಯ ಕೇಂದ್ರದ ಬಾಗಿಲು ಬಂದ್: ಆಸ್ಪತ್ರೆ ಹೊರಗೆ ಮಗುವಿಗೆ ಜನ್ಮ ನೀಡಿದ ಮಹಿಳೆ
ಸಭೆಯಲ್ಲಿ ಇವರಿಗೆ ಆಯಾಸವಾಗಿದ್ದು, ಮತ್ತೋರ್ವ ಸದಸ್ಯರ ಸಹಾಯದಿಂದ ನಿರ್ಗಮಿಸಿದರು. ಪಾಲಿಕೆಯ ಲಿಫ್ಟ್ ಅವ್ಯವಸ್ಥೆಯಿಂದಾಗಿ ಸುಮಾರು ಹೊತ್ತು ಕಾಯುವಂತಾಯಿತು. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆ ಹೊರಗಡೆ ಮಗುವಿಗೆ ಜನ್ಮ (ಪ್ರತ್ಯೇಕ ಘಟನೆ): ಖಾಸಗಿ ಆಸ್ಪತ್ರೆಯ ಖರ್ಚು ಭರಿಸಲಾಗದೇ ಬಹಳಷ್ಟು ಮಹಿಳೆಯರು ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗಳ ಮೊರೆ ಹೋಗುತ್ತಾರೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದಾಗಿ ಅಥವಾ ಅಲ್ಲಿದ್ದವರ ನಿರ್ಲಕ್ಷ್ಯದಿಂದಲೋ ಬಹಳಷ್ಟು ಬಾರಿ ಗಂಭೀರ ಸ್ವರೂಪದ ಅಚಾತುರ್ಯಗಳಾಗುತ್ತವೆ. ಇದಕ್ಕೆ ಪೂರಕವೆಂಬಂತೆ ವಿಜಯಪುರದಲ್ಲಿ ಘಟನೆ ನಡೆದಿತ್ತು. ಹೆರಿಗೆ ನೋವು ತಾಳಲಾರದೆ ಮಹಿಳೆಯೊಬ್ಬರು ಆಸ್ಪತ್ರೆಯ ಹೊರಗಡೆಯೇ ಮಗುವಿಗೆ (ಫೆಬ್ರವರಿ 24-2023) ಜನ್ಮ ನೀಡಿದ್ದರು. ನಾಗಠಾಣ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಘಟನೆ ನಡೆದಿತ್ತು.
ಇದನ್ನೂ ಓದಿ: ಬಸ್ನಲ್ಲಿಯೇ ಮಹಿಳೆಗೆ ಹೆರಿಗೆ ಮಾಡಿಸಿದ ನಿರ್ವಾಹಕಿ.. ಕಂಡಕ್ಟರ್ ಸಮಯಪ್ರಜ್ಞೆ, ಮಾನವೀಯತೆಗೆ ಸಲಾಂ