ನಾಸಿಕ್​ನ ರಾಮಕುಂಡದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

By ETV Bharat Karnataka Team

Published : Jan 12, 2024, 6:57 PM IST

thumbnail

ನಾಸಿಕ್ (ಮಹಾರಾಷ್ಟ್ರ): ಇಂದಿನ ಮಹಾರಾಷ್ಟ್ರ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ನಾಸಿಕ್‌ನಲ್ಲಿರುವ ರಾಮಕುಂಡದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಕ್ತರು ಹಾಗೂ ನಾಗರಿಕರು ಮುಂದೆ ಬಂದು ದೇಶಾದ್ಯಂತ ಎಲ್ಲ ದೇವಾಲಯಗಳಲ್ಲಿ ಇದೇ ರೀತಿಯ ಸ್ವಚ್ಛತಾ ಅಭಿಯಾನಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದರು. ದೇವಾಲಯಕ್ಕೆ ಭೇಟಿ ಮಾಡಿದ ಸಮಯದಲ್ಲಿ ಪ್ರಧಾನಿ ಅವರೊಂದಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್, ಅಜಿತ್ ಪವಾರ್ ಇದ್ದರು.

ನಾಸಿಕ್‌ನಲ್ಲಿರುವ ಸ್ವಾಮಿ ವಿವೇಕಾನಂದ ಅವರ ಜನ್ಮ ದಿನಾಚರಣೆ ನಿಮಿತ್ತ ಅವರ ಪ್ರತಿಮೆಗೆ ಪ್ರಧಾನಿ ಮೋದಿ ಮಾಲಾರ್ಪಣೆ ಮಾಡಿದರು. ರಾಮಾಯಣಕ್ಕೆ ಸಂಬಂಧಿಸಿದ ಐತಿಹಾಸಿಕ ಸ್ಥಳಗಳಲ್ಲಿ, ಪಂಚವಟಿಗೆ ವಿಶೇಷ ಸ್ಥಾನವಿದೆ. ಏಕೆಂದರೆ, ರಾಮಾಯಣದ ಹಲವಾರು ಪ್ರಮುಖ ಘಟನೆಗಳು ಈ ಭಾಗಗಳಲ್ಲಿ ನಡೆದಿವೆ. ಶ್ರೀ ಕಲಾರಾಮ ಮಂದಿರವು ನಾಸಿಕ್‌ನ ಗೋದಾವರಿ ನದಿಯ ದಡದಲ್ಲಿದೆ.

ಬಳಿಕ ಪ್ರಧಾನಿ ಮೋದಿ ಅವರು ಛತ್ರಪತಿ ಸಂಭಾಜಿನಗರ- ನಾಸಿಕ್ ಹೆದ್ದಾರಿಯಲ್ಲಿ ಮಿರ್ಚಿ ವೃತ್ತದಿಂದ ಜನಾರ್ದನ ಸ್ವಾಮಿ ಮಠದ ಚೌಕ್ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಪಥಸಂಚಲನ ನಡೆಸಿದರು. ಅವರೊಂದಿಗೆ ಸಿಎಂ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಹಾಗೂ ಅಜಿತ್ ಪವಾರ್, ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ್ ಬವಾಂಕುಲೆ ಇದ್ದರು. 1,50,000 ಕ್ಕೂ ಹೆಚ್ಚು ಜನರು ರೋಡ್‌ಶೋನಲ್ಲಿ ಭಾವಹಿಸಿದ್ದರು. ಜೊತೆಗೆ ಇಂದು 17,840 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಅಟಲ್ ಸೇತುವೆ (ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್) ಅನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಅಟಲ್ ಸೇತುವೆಯು ದೇಶದ ಅತಿ ಉದ್ದದ ಸಮುದ್ರ ಸೇತುವೆ ಆಗಿದೆ.

ಇದನ್ನೂ ಓದಿ: ದೇಶದ ಅತಿ ಉದ್ದದ ಸಮುದ್ರ ಸೇತುವೆ 'ಅಟಲ್ ಸೇತು' ಇಂದು ಉದ್ಘಾಟನೆ: ಹಲವು ವಿಶೇಷತೆಗಳು!

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.