ಧಾರವಾಡಕ್ಕಿಂದು ಪ್ರಧಾನಿ ಮೋದಿ: ಬಿಗಿ ಪೊಲೀಸ್ ಭದ್ರತೆ
🎬 Watch Now: Feature Video
ಧಾರವಾಡ: ಇಂದು ವಿದ್ಯಾಕಾಶಿಯಲ್ಲಿರುವ ಐಐಟಿ ಉದ್ಘಾಟನೆಗಾಗಿ ಮೋದಿ ಧಾರವಾಡಕ್ಕೆ ಆಗಮಿಸಲಿದ್ದಾರೆ. ಈ ಹಿನ್ನೆಲೆ ಅಂತಿಮ ಹಂತದ ಸಿದ್ದತೆ ಭರದಿಂದ ಸಾಗಿವೆ. ಧಾರವಾಡದ ಹೊರಹೊಲಯದ ಚಿಕ್ಕಮಲ್ಲಿಗವಾಡ ಬಳಿ ಇರುವ ಐಐಟಿ ಕ್ಯಾಂಪಸ್ ಮುಂಭಾಗದಲ್ಲಿ ಬೃಹತ್ ವೇದಿಕೆ ಸಿದ್ದಗೊಂಡಿದೆ. ವಿಜಯನಗರ ಚಾಲುಕ್ಯರ ಮಾದರಿಯಲ್ಲಿ ವೇದಿಕೆ ಸಿದ್ದಪಡಿಸಲಾಗಿದೆ. ಮೋದಿ ಆಗಮನಕ್ಕಾಗಿ ಭಾರಿ ಪೊಲೀಸ್ ಬಿಗಿ ಭದ್ರತೆ ನಿಯೋಜಿಸಲಾಗಿದೆ. 5 ಎಸ್ಪಿ, 8 ಅಡಿಷನಲ್ ಎಸ್ಪಿ, 28 ಡಿಸಿಪಿ, 63 ಸಿಪಿಐ, 158ಎಸ್ಐ, 125 ಪಿಎಸ್ಐ, 1484 ಹೆಡ್ ಕಾನ್ಸ್ಟೇಬಲ್ಗಳು , 10 ಡಿಆರ್, 15 ಕೆಎಸ್ಆರ್ಪಿ ಸೇರಿ 2 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
2 ಲಕ್ಷ ಜನರು ಕಾರ್ಯಕ್ರಮಕ್ಕೆ ಬರುವ ಸಾಧ್ಯತೆಯಿದೆ. ಈ ಹಿನ್ನೆಲೆ ಎಲ್ಲರಿಗೂ ಆಸನದ ವ್ಯವಸ್ಥೆ ಕೂಡ ಜಿಲ್ಲಾಡಳಿತ ಮಾಡಿಕೊಂಡಿದೆ. ಊಟದ ವ್ಯವಸ್ಥೆ ಸೇರಿದಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 4 ಭಾಗಗಳಲ್ಲಿ ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಊಟದ ವ್ಯವಸ್ಥೆಗಾಗಿ 200ಕ್ಕೂ ಹೆಚ್ಚು ಕೌಂಟರ್ ಗಳ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಐಐಟಿ ಕ್ಯಾಂಪಸ್ ಒಳಾಂಗಣದಲ್ಲಿ ಹೆಲಿಪ್ಯಾಡ್ ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮಧ್ಯಾಹ್ನ 3ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ನೇರವಾಗಿ ಹೆಲಿಕ್ಯಾಪ್ಟರ್ ಮೂಲಕ ಐಐಟಿಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಐಐಟಿ ಕಟ್ಟಡ ಉದ್ಘಾಟಿಸಿ, ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂಓದಿ: ರಾಜ್ಯದಲ್ಲಿ ನಿಶ್ಚಿತವಾಗಿಯೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ: ಮಾಜಿ ಸಿಎಂ ಬಿಎಸ್ವೈ ವಿಶ್ವಾಸ