Watch video: ಗ್ಯಾಸ್ ಕಟ್ಟರ್ ಮೂಲಕ ಚಿನ್ನ ದೋಚಲು ಪ್ಲಾನ್; ಅಂಗಡಿಯಲ್ಲಿ ಸಿಬ್ಬಂದಿ ಕಂಡು ಕಳ್ಳರ ಗ್ಯಾಂಗ್ ಎಸ್ಕೇಪ್ - ನಂದಗುಡಿ ಪೊಲೀಸರು
🎬 Watch Now: Feature Video
ಹೊಸಕೋಟೆ (ಬೆಂಗಳೂರು ಗ್ರಾಮಾಂತರ) : ಹೆದ್ದಾರಿ ಬದಿಯಲ್ಲಿದ್ದ ಚಿನ್ನದಂಗಡಿಗೆ ಬಂದ ಖದೀಮರು ಗ್ಯಾಸ್ ಕಟ್ಟರ್ ಮೂಲಕ ಚಿನ್ನ ದೋಚಲು ಹೋಗಿ ವಿಫಲವಾಗಿರುವ ಘಟನೆ ತಾವರೆಕೆರೆಯಲ್ಲಿ ನಡೆದಿದೆ. ಕಳ್ಳತನ ಯತ್ನ ವಿಫಲವಾಗಿ ಖದೀಮರು ಸ್ಥಳದಿಂದ ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬುಧವಾರ ಮುಂಜಾನೆ ಹೊತ್ತಿಗೆ ಲಕ್ಷ್ಮೀ ಜುವೆಲರ್ಸ್ಗೆ ದರೋಡೆ ಮಾಡಲು ಕಳ್ಳರ ಗ್ಯಾಂಗ್ವೊಂದು ಬಂದಿತ್ತು. ಮೊದಲಿಗೆ ಅಂಗಡಿ ಮುಂದಿನ ಬಲ್ಬ ಕಿತ್ತು ಹಾಕಿ ಕಳ್ಳತನಕ್ಕೆ ತಯಾರಿ ನಡೆಸಿದ ಖದೀಮರು ನಂತರ ಗ್ಯಾಸ್ ಕಟ್ಟರ್ನಿಂದ ಅಂಗಡಿ ಶೆಟರ್ ಕಟ್ ಮಾಡಲು ಯತ್ನ ಮಾಡಿದ್ದಾರೆ. ಆದರೇ ಈ ವೇಳೆ ಅಂಗಡಿ ಒಳಗಿಂದ ಸಿಬ್ಬಂದಿ ಕಿರುಚಾಡಿದ ಹಿನ್ನೆಲೆ ಕಳ್ಳತನಕ್ಕೆ ತಂದಿದ್ದ ಗ್ಯಾಸ್ ಕಟರ್, ರಾಡ್ಗಳ ಸಮೇತ ಖದೀಮರು ಎಸ್ಕೇಪ್ ಆಗಿದ್ದಾರೆ. ಈ ಕಳ್ಳತನ ಯತ್ನದಿಂದ ಅಂಗಡಿ ಮಾಲೀಕರು ಬೆಚ್ಚಿ ಬಿದ್ದಿದ್ದಾರೆ. ಸ್ಥಳಕ್ಕೆ ನಂದಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ : ಚಂದ್ರಗುತ್ತಿ ರೇಣುಕಾಂಬ ದೇವಾಲಯಕ್ಕೆ ನುಗ್ಗಿದ ಕಿಡಿಗೇಡಿಗಳು.. ಕಳ್ಳತನಕ್ಕೆ ಯತ್ನ