20000 ಕೆಂಪು ಅಡಕೆಗಳಿಂದ ದೇವಸ್ಥಾನ ಸ್ತಂಭಗಳ ಅಲಂಕಾರ
🎬 Watch Now: Feature Video
ಕಣ್ಣೂರು (ಕೇರಳ): ಇಲ್ಲಿಯ ಮಾಟಮಂಗಲಂನಲ್ಲಿರುವ ನಿಲಾಯರ್ ಭಗವತಿ ದೇವಸ್ಥಾದಲ್ಲಿ ಕಲಿಯಾಟಂ ಎಂಬ ಉತ್ಸವದ ಪ್ರಯುಕ್ತ ಕೆಂಪು ಅಡಕೆಯಿಂದ ದೇವಸ್ಥಾನ ಸ್ತಂಭಗಳನ್ನು ಸಿಂಗಾರಗೊಳಿಸಲಾಗಿತ್ತು. ಫೆ.4 ರಿಂದ 8 ವರೆಗೆ ನಡೆದ ಈ ಉತ್ಸವದಲ್ಲಿ ಸುಮಾರು 20,000 ಕೆಂಪು ಅಡಕೆಗಳನ್ನು ಬಳಸಿ ದೇವಸ್ಥಾನದ ಸ್ತಂಭಗಳನ್ನು ಸಿಂಗಾರಗೊಳಿಸಲಾಗಿತ್ತು. ಇನ್ನು ಪ್ರತಿವರ್ಷ ನಡೆಯುವ ಈ ಉತ್ಸವಕ್ಕೆ 20000 ಮಾಗಿದ ಅಡಕೆಗಳನ್ನು ತಂದು ಅಲಂಕಾರ ಮಾಡಲಾಗುತ್ತದೆ.
ಅಲ್ಲದೇ ಈ ಉತ್ಸವದಂದು ಸುತ್ತ ಊರುಗಳಲ್ಲಿ ಬೆಳೆದಿರುವ ತಾಜಾ ಅಡಕೆಯನ್ನು ತರಲಾಗುತ್ತದೆ. ಬಳಿಕ ದೇವಸ್ಥಾನದ ಕಂಬಗಳನ್ನು ಶುದ್ಧಿಕರಿಸಿ ಅಡಕೆಗಳನ್ನು ದಾರದಿಂದ ಪೋಣಿಸಿ ಆ ಕಂಬಗಳಿಗೆ ಕಟ್ಟಲಾಗುತ್ತದೆ. ಈ ಉತ್ಸವ ನೋಡಲು ಕೇರಳದ ಬೇರೆ ಬೇರೆ ಜಿಲ್ಲೆಗಳಿಂದ ಸಾವಿರಾರು ಜನರು ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಈ ನಾಲ್ಕುದಿನಗಳ ಕಾಲ ತೆಯ್ಯಂ (ಮೂರ್ತಿಗಳ) ಪ್ರದರ್ಶನವೂ ಇಲ್ಲಿ ನಡೆಯುತ್ತವೆ.
ಇದನ್ನೂ ಓದಿ: ಭಂಡಾರ ಒಡತಿ ಮಾಯಕ್ಕದೇವಿ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ