ನೀರಾವರಿ ಇಲಾಖೆಯಲ್ಲಿ 400 ಹುದ್ದೆಗಳ ನೇಮಕಾತಿ: ಸಚಿವ ಕಾರಜೋಳ
🎬 Watch Now: Feature Video
ಬೆಂಗಳೂರು: ನೀರಾವರಿ ಇಲಾಖೆಯಲ್ಲಿ ಕೆಲ ವರ್ಷಗಳಿಂದ ಖಾಲಿ ಇದ್ದ ಹುದ್ದೆಗಳ ಭರ್ತಿಗೆ ಅನುಮತಿ ದೊರೆತಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು. ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನೀರಾವರಿ ಇಲಾಖೆಯಲ್ಲಿ 400 ಹುದ್ದೆಗಳ ನೇಮಕಕ್ಕೆ ಅನುಮತಿ ನೀಡಿದ್ದು, 300 ಮಂದಿ ಸಹಾಯಕ ಇಂಜಿನಿಯರ್, 100 ಮಂದಿ ಜ್ಯೂನಿಯರ್ ಇಂಜಿನಿಯರ್ ನೇಮಕ ಮಾಡಿಕೊಳ್ಳಲಾಗುವುದು. ಸಿವಿಲ್ ಇಂಜಿನಿಯರ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುತ್ತಿದ್ದೇವೆ. ಹಣಕಾಸು ಇಲಾಖೆ ಒಪ್ಪಿಗೆ ಪಡೆದು ಅಧಿಸೂಚನೆ ಮಾಡಿಕೊಳ್ಳಬೇಕು. ಇದು ಕಾಂಟ್ರಾಕ್ಟ್ ಆಧಾರಿತ ನೇಮಕಾತಿ. ಮೆರಿಟ್ ಮತ್ತು ರೋಸ್ಟರ್ ಆಧಾರದ ಮೇಲೆ ಪ್ರಕ್ರಿಯೆ ನಡೆಯಲಿದೆ ಎಂದರು.
ಇದನ್ನೂ ಓದಿ: ವಾಹನಗಳ ದಂಡ ಪಾವತಿಯಲ್ಲಿ ಶೇ 50ರಷ್ಟು ಡಿಸ್ಕೌಂಟ್: ಒಂದೇ ದಿನ ಸಂಗ್ರಹವಾದ ಮೊತ್ತ ಎಷ್ಟು ಗೊತ್ತೇ?