ಖಾಸಗಿ ಹೋಟೆಲ್ಗೆ ನುಗ್ಗಿದ ಚಿರತೆ.. ಅದೃಷ್ಟವಶಾತ್ ಪಾರಾದ ಸಿಬ್ಬಂದಿ: ವಿಡಿಯೋ - ಹೋಟೆಲ್ಗೆ ನುಗ್ಗಿದ ಚಿರತೆ
🎬 Watch Now: Feature Video
Published : Jan 18, 2024, 10:28 PM IST
ಜೈಪುರ( ರಾಜಸ್ಥಾನ): ಇಲ್ಲಿಯ ಕನೋಟಾ ಎಂಬಲ್ಲಿ ಅರಣ್ಯದಿಂದ ಬಂದ ಚಿರತೆಯೊಂದು ಖಾಸಗಿ ಹೋಟೆಲ್ಗೆ ನುಗ್ಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಹೋಟೆಲ್ ಒಳಗೆ ಪ್ರವೇಶಿಸಿದ ಚಿರತೆ ಕೊಠಡಿಯೊಂದರಲ್ಲಿ ಅಡಗಿ ಕುಳಿತಿದೆ. ಇದನ್ನು ಕಂಡು ಸಿಬ್ಬಂದಿ ಕೂಡಲೇ ಕೊಠಡಿ ಬಾಗಿಲನ್ನು ಮುಚ್ಚಿದ್ದಾರೆ. ಈ ಬಗ್ಗೆ ತಿಳಿಯುತ್ತಿದ್ದಂತೆ ಎಚ್ಚೆತ್ತ ಸಿಬ್ಬಂದಿ ಅಲ್ಲಿ ತಂಗಿದ್ದ ಅತಿಥಿಗಳನ್ನು ಬೇರೊಂದು ಹೋಟೆಲ್ಗೆ ಸ್ಥಳಾಂತರಿಸಿದ್ದಾರೆ. ಇನ್ನೂ ಕೆಲವರು ಹೋಟೆಲ್ ಅನ್ನೇ ತೊರೆದಿದ್ದಾರೆ.
ನಂತರ ಅಲ್ಲಿಯ ಸಿಬ್ಬಂದಿ ವಿಷಯವನ್ನು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿ ಚಿರತೆಗೆ ಅರವಳಿಕೆ ನೀಡಿದ್ದಾರೆ. ಬಳಿಕ ಜೈಪುರದ ಮೃಗಾಲಯಕ್ಕೆ ಕೊಂಡೊಯ್ದಿದ್ದಾರೆ. 2 ಗಂಟೆಗಳ ಕಾಲ ಹೋಟೆಲ್ ಕೊಠಡಿಯಲ್ಲೇ ಚಿರತೆಯನ್ನು ಬಂಧಿಸಲಾಗಿತ್ತು. ಹೋಟೆಲ್ ಕನೋಟಾ ಕ್ಯಾಸಲ್‌ಗೆ ಚಿರತೆ ನುಗ್ಗಿದ ಬಗ್ಗೆ ಬೆಳಗ್ಗೆ 9.50ರ ಸುಮಾರಿಗೆ ಹೋಟೆಲ್ ಸಿಬ್ಬಂದಿ ಮೂಲಕ ಮಾಹಿತಿ ಪಡೆಯಲಾಯಿತು. ಅದೃಷ್ಟವಶಾತ್ ಕೊಠಡಿಯಲ್ಲಿ ವಾಸ ಮಾಡುತ್ತಿದ್ದ ಸಿಬ್ಬಂದಿ ತಮ್ಮ ಮಗನಿಗೆ ಶಾಲೆಗೆ ಬಿಡಲು ತೆರಳಿದ್ದರು. ಹಾಗಾಗಿ ಯಾವುದೇ ದುರ್ಘಟನೆ ನಡೆದಿಲ್ಲ. 11.40ರ ಸುಮಾರಿಗೆ ಚಿರತೆಯನ್ನು ರಕ್ಷಣೆ ಮಾಡಿ ಕೊಂಡೊಯ್ಯಲಾಗಿದೆ. ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಮುರುಡೇಶ್ವರ ಬಳಿ ಕಾಣಿಸಿಕೊಂಡ ಜೋಡಿ ತಿಮಿಂಗಿಲುಗಳು: ವಿಡಿಯೋ ಸೆರೆ